ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ನಿಧನ

SADASHIVA SHETTY
SADASHIVA SHETTY
Published on

ಮಂಗಳೂರು: ಕಟೀಲು ಮೇಳದಲ್ಲಿ 20 ವರ್ಷಗಳಿಂದ ವೇಷಧಾರಿಯಾಗಿ, 3ನೇ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದ ಮುಂಡಾಜೆ ಸದಾಶಿವ ಶೆಟ್ಟಿ ಶನಿವಾರ ನಿಧನರಾದರು. ಧರ್ಮಸ್ಥಳ, ಕರ್ನಾಟಕ, ಸಸಿಹಿತ್ಲು ಮೇಳಗಳಲ್ಲಿ ತುಳು- ಕನ್ನಡ ಪ್ರಸಂಗಗಳಲ್ಲಿ ಎಲ್ಲ ಸ್ವರೂಪದ ಪಾತ್ರಗಳನ್ನು ನಿರ್ವಹಿಸಿದ್ದ ಕಲಾವಿದರಾಗಿದ್ದರು. ಹೃದಯ ಸಂಬಂಧಿ ಅನಾರೋಗ್ಯ ನಿಮಿತ್ತ ಕೆಲದಿನಗಳ ಹಿಂದಷ್ಟೇ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆದು ಚೇತರಿಸಿ ಮನೆಗೆ ಮರಳಿದ್ದರು.

ಪಡ್ರೆ ಚಂದು ಅವರ ಶಿಷ್ಯರಾದ ಸದಾಶಿವ ಶೆಟ್ಟಿ ಧರ್ಮಸ್ಥಳ ಮೇಳದಲ್ಲಿ ದೀರ್ಘ ಕಾಲದ ತಿರುಗಾಟ ಮಾಡಿದವರು. ಪ್ರಸಿದ್ಧ ಕಲಾವಿದರೊಂದಿಗೆ ಒಡನಾಟ ಪಡೆದ ಅವರು ಅನುಭವಿ ಕಲಾವಿದ ಮತ್ತು ಸಹೋದರ ಬಾಲಕೃಷ್ಣ ಶೆಟ್ಟಿ ಕರ್ನಾಟಕ ಮೇಳದಲ್ಲಿ ದೀರ್ಘ ತಿರುಗಾಟ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net