ಕಲಾವಿದರು ಉಳಿದರೆ ಕಲೆ ಉಳಿದೀತು, ದೊಡ್ಡಾಟ ಕಲಾವಿದ ರಮೇಶ ಅಭಿಮತ

IMG-20230823-WA0014.jpg
Published on

ಹುಬ್ಬಳ್ಳಿ: ಯಾವುದೇ ಕಲೆ ಉಳಿದು, ಬೆಳೆದು ಮುಂದಿನ ಜನಾಂಗಕ್ಕೆ ಸಾಗಬೇಕಾದರೆ ಕಲಾವಿದರು ಬದುಕಿದರೆ ಮಾತ್ರ ಸಾಧ್ಯ ಎಂದು ಹಿರಿಯ ದೊಡ್ಡಾಟ ಕಲಾವಿದ ರಮೇಶ ಕರಬಸಪ್ಪನವರ ಅಭಿಪ್ರಾಯ ಪಟ್ಟರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ, ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ಮತ್ತು ಜೀವಿ ಕಲಾ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಗೋಕುಲ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿಶ್ವ ಜಾನಪದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಕಲಾವಿದರು ನೇಪಥ್ಯಕ್ಕೆ ಸರಿಯುತ್ತಿದ್ದು, ಅವರಿರುವುವಾಗಲೇ ಅವರಲ್ಲಿನ ಅಗಾಧ ಕಲಾಸಂಪತ್ತನ್ನು ಸಂಗ್ರಹಿಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಫ್.ಬಿ. ಸೊರಟೂರ ಮಾತನಾಡಿದರು. ಪ್ರೊ. ಶಂಕರಗೌಡ ಸಾತ್ಮಾರ ಉಪನ್ಯಾಸ ನೀಡಿದರು.

ಮೌನೇಶ ಬಡಿಗೇರ, ಬಸಪ್ಪ ಉಣಕಲ್ಲ, ಎಂ.ಎಸ್. ಪಾಟೀಲ, ವೀರಣ್ಣ ಬಡಿಗೇರ, ವೀರೇಶ ಹಂಡಿಗಿ, ಜೆ.ಜೆ. ಹೆಗಡೆ, ಚಂದ್ರಶೇಖರ ಎಂ., ಪೂಣಿರ್ಮಾ ನಾಡಿಗೇರ ಅತಿಥಿಗಳಾಗಿದ್ದರು.

ಹಿರಿಯ ದಾಲಪಟ್ಟಾ ಕಲಾವಿದ ಹನುಮಂತಪ್ಪ ಉಳ್ಳಿ, ಭಜನಾ ಕಲಾವಿದ ಬಸವಂತಪ್ಪ ಹಡಪದ, ದೊಡ್ಡಾಟ ಕಲಾವಿದ ಶಿವರುದ್ರಪ್ಪ ಬಡಿಗೇರ, ಸಾಹಿತಿ ಪ್ರಭು ಕುಂದರಗಿ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಜಾನಪದ ಪರಿಷತ್ ನ ಡಾ. ರಾಮು ಮೂಲಗಿ ಪ್ರಾಸ್ತಾವಿಕ ಮಾತನಾಡಿದರು. ಎಂ.ಎಂ. ಗಂಗಣ್ಣವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net