ಗಣೇಶ ವಿಸರ್ಜನೆ ಕೃತಕ ಬಾವಿ

inner wheel club
Published on

ಹುಬ್ಬಳ್ಳಿ: ಇಲ್ಲಿಯ ಇನ್ನರ್ ವ್ಹೀಲ್ ಕ್ಲಬ್ ಹಾಗೂ ಜೆ.ಜಿ. ಕಾಮರ್ಸ್ ಕಾಲೇಜಿನ ಎನ್​ಎಸ್​ಎಸ್ ಘಟಕದ ವತಿಯಿಂದ ಗೋಕುಲ ರಸ್ತೆ ಅಕ್ಷಯ ಪಾರ್ಕ್​ನಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಕೃತಕ ಬಾವಿಯ ವ್ಯವಸ್ಥೆ ಮಾಡಲಾಗಿತ್ತು.

ಭಾನುವಾರ 5ನೇ ದಿನದ ಗಣೇಶ ಮೂರ್ತಿಗಳ ವಿಸರ್ಜನೆಗೆ ಸುತ್ತಲಿನ ನಿವಾಸಿಗಳು ಈ ವ್ಯವಸ್ಥೆಯ ಪ್ರಯೋಜನ ಪಡೆದರು. ಈ ರೀತಿ ಕಳೆದ ಸತತ ಹದಿಮೂರು ವರ್ಷಗಳಿಂದ ಪರಿಸರ ಸಂರಕ್ಷಣೆ ಹಾಗೂ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಇನ್ನರ್ ವ್ಹೀಲ್ ಕ್ಲಬ್ ತೋರಿಸುತ್ತಿರುವ ಸಾಮಾಜಿಕ ಕಳಕಳಿಗೆ ಅಕ್ಷಯ ರ್ಪಾನ ನಿವಾಸಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕ್ಲಬ್ ಅಧ್ಯಕ್ಷೆ ಸುಷಮಾ ಹಿರೇಮಠ, ಕಾರ್ಯದರ್ಶಿ ರೇಖಾ ಪಾಟೀಲ, ವಿಜಯಲಕ್ಷ್ಮೀ ಕಟ್ಟಿಮಠ, ಎಲೀನಾ, ಜೆ. ಜಿ. ಕಾಮರ್ಸ್ ಕಾಲೇಜಿನ ಬಸವರಾಜ ಹುಬ್ಬಳ್ಳಿ, ಸ್ವಯಂ ಸೇವಕರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net