

ಹುಬ್ಬಳ್ಳಿ: ಅಪಘಾತದಲ್ಲಿ ಗಾಯಗೊಂಡಿದ್ದ ಗೋಮಾತೆಗೆ ಕೃತಕ ಕಾಲು ಜೋಡಣೆ ಮಾಡುವಲ್ಲಿ ಇಲ್ಲಿಯ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಶನ್ ಮಹಾವೀರ ಲಿಂಬ್ ಸೆಂಟರ್ ಯಶಸ್ವಿಯಾಗಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗದಲ್ಲಿ ವೆಂಗಮಾಂಬ ಗೋವರ್ಧನಗಿರಿ ಗೋಶಾಲೆಯ ಆಕಳು ಅಪಘಾತದಲ್ಲಿ ಕಾಲು ಕಳೆದುಕೊಂಡಿತ್ತು.
ವಿಷಯ ತಿಳಿದ ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಅವರ ನೇತೃತ್ವದಲ್ಲಿ ಕೃತಕ ಕಾಲು ತಜ್ಞ ಎಂ.ಎಚ್. ನಾಯ್ಕರ ಮತ್ತು ತಂಡದವರು ಆಂಧ್ರಪ್ರದೇಶಕ್ಕೆ ತೆರಳಿ ಕಾಲು ಜೋಡಿಸಿದ್ದಾರೆ.
ಮೊದಲು ಗೋಮಾತೆಯ ಕಾಲಿನ ಅಳತೆ ಪಡೆದು, ನಂತರ ಕೃತಕ ಕಾಲು ಸಿದ್ಧಪಡಿಸಿ ಜೋಡಿಸಲಾಯಿತು. ಗಾಯಗೊಂಡ ಅಕಳು ಇದೀಗ ಆರಾಮವಾಗಿ ಮೊದಲಿನಂತೆ ನಡೆದಾಡುತ್ತಿದೆ.
ಉಪಸ್ಥಿತರಿದ್ದ ಕಲ್ಯಾಣದುರ್ಗ ಗೋಶಾಲೆಯ ಗಂಗಾಧರ, ಈ ರೀತಿ ಅಪಘಾತದಲ್ಲಿ ಗಾಯಗೊಂಡ ಮೂಖ ಪ್ರಾಣಿಗಳಿಗೆ ಮಹಾವೀರ ಲಿಂಬ್ ಸೆಂಟರ್ ಕೃತಕ ಕಾಲು ಜೋಡಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.