ಹುಬ್ಬಳ್ಳಿ: ಇಲ್ಲಿಯ ಮಜೇಥಿಯಾ ಫೌಂಡೇಷನ್ ವತಿಯಿಂದ ಸೆಪ್ಟೆಂಬರ್ 14ರಂದು ಬೆಳಗ್ಗೆ 10ಕ್ಕೆ ನಗರದ ಮೂರುಸಾವಿರ ಮಠ ಸಭಾ ಭವನದಲ್ಲಿ ಉಚಿತ ಕೃತಕ ಅಂಗಗಳ ಜೋಡಣೆ ಶಿಬಿರ ಏರ್ಪಡಿಸಲಾಗಿದೆ.
ಸುಮಾರು 128 ವಿಶೇಷ ಚೇತನರಿಗೆ ವಿವಿಧ ಸೇವೆಗಳನ್ನು ನೀಡಲಾಗುತ್ತದೆ. ಕೃತಕ ಕಾಲು 80, ಕಾರ್ಯಮಾಡುವ ಕೃತಕ ಕೈ 26, ವಿಶೇಷ ಮೊಣಕಾಲಿನಿಂದ ಪಾದ ಜೋಡಿಸುವ (ಕೆಎಎಫ್ಒ) ಸಾಧನ 16 ಹಾಗೂ ಅವಶ್ಯಕ ಸಲಕರಣೆಗಳು 6 ಸೇರಿ ನೂರಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.