ಮಜೇಥಿಯಾದಿಂದ ಕೃತಕ ಕಾಲು ಮಾಪನ ಶಿಬಿರ, ಅಂಗವಿಕಲರಿಗೆ ಪ್ರೋತ್ಸಾಹ ನೀಡುವುದು ಅಗತ್ಯ

IMG-20250810-WA0028.jpg
Published on

ಹುಬ್ಬಳ್ಳಿ: ಅಂಗವಿಕಲರ ಬಗ್ಗೆ ಕನಿಕರದ ಜೊತೆಗೆ ಅವರಿಗೆ ಪ್ರೋತ್ಸಾಹ ನೀಡುವ ಕೆಲಸವೂ ಆಗಬೇಕು. ಆಗಲೇ ಸಮಾಜದಲ್ಲಿ ಆರ್ಥಿಕ, ಶೈಕ್ಷಣಿಕ ಸಮಾನತೆ ಕಾಣಲು ಸಾಧ್ಯ ಎಂದು ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಹೇಳಿದರು.

ಇಲ್ಲಿಯ ಮೂರುಸಾವಿರ ಮಠದ ಸಭಾಭವನದಲ್ಲಿ ಭಾನುವಾರ ಮಜೇಥಿಯಾ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಕೃತಕ ಕಾಲು-ಕೈ ಮಾಪನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗವಿಕಲರು ಜೀವನ ಸಾಗಿಸಲು ಬೇಕಾದ ಪ್ರೋತ್ಸಾಹವನ್ನು ಫೌಂಡೇಷನ್ ನೀಡುತ್ತಿದೆ. ಶಿಕ್ಷಣ, ಆರೋಗ್ಯ, ಸಮಾಜ ಸುಧಾರಣೆ ಬಗ್ಗೆ ಕಾಳಜಿ ವಹಿಸುತ್ತಿದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ರ್ದುಬಲರ ಹಿತ ಕಾಯುವ ಕೆಲಸ ಮಾಡುತ್ತಿದೆ. ಇತರ ಸಂಘ -ಸಂಸ್ಥೆಗಳು ಸಹ ಇಂತಹ ಸೇವಾ ಕಾರ್ಯದಲ್ಲಿ ತೊಡಗಬೇಕು ಎಂದರು.

141 ಅಂಗವಿಕಲರ ಕಾಲು ಮತ್ತು ಕೈಗಳ ಅಳತೆ ಪಡೆಯಲಾಯಿತು. ಟ್ರಸ್ಟಿಗಳಾದ ರಮೇಶ ಬಾಬು, ಪ್ರಹ್ಲಾದ ರಾವ್, ರಮಿಲಾ ಜಿತೇಂದ್ರ ಮಜೇಥಿಯಾ, ಕಶ್ಯಪ ಮಜೇಥಿಯಾ, ಅಮೃತ ಲಾಲ್, ದಯಾಬಾಯಿ ಪಟೇಲ್, ಅಮರೇಶ ಹಿಪ್ಪರಗಿ, ಫೌಂಡೇಷನ್ ಸಿಇಒ ಸುನೀಲಕುಮಾರ್ ಕುಕನೂರ, ಡಾ. ಶಂಕರ ಕಮತೆ, ಡಾ. ಕವಿತಾ ಮೊಹರೆ, ನವೀನ್, ಶ್ವೇತಾ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net