ಇನ್ನರವ್ಹೀಲ್ ಕ್ಲಬ್ ನಿಂದ ಕೃತಕ ಕಾಲು ಜೋಡಣೆ

IMG_20241009_204805_993.jpg
Published on

ಹುಬ್ಬಳ್ಳಿ: ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮತ್ತು ಆಲ್ ಇಂಡಿಯಾ ಜೈನ್ ಯುಥ್ ಫೆಡರೇಶನ್ ಮಹಾವೀರ ಲಿಂಬ್ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ಉಚಿತ ಕೃತಕ ಕಾಲು ಜೋಡಣೆ ಶಿಬಿರ ಮಂಗಳವಾರ ನಗರದ ಕೆಎಂಸಿ ಪ್ರಾಂಗಣದ ಮಹಾವೀರ ಲಿಂಬ್ ಸೆಂಟರ್ ನಲ್ಲಿ ಜರುಗಿತು.

ಧಾರವಾಡ, ಬೆಳಗಾವಿ, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಬಳ್ಳಾರಿ ಜಿಲ್ಲೆಗಳ 20 ಜನ ಅಂಗವಿಕಲರಿಗೆ ಕೃತಕ ಕಾಲು ಜೋಡಿಸಲಾಯಿತು.

ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಪ್ರಿಯದರ್ಶಿನಿ ಕೊಟ್ಟೂರಶೆಟ್ಟರ, ಕಾರ್ಯದರ್ಶಿ ಸುಷ್ಮಾ ಹಿರೇಮಠ, ಖಜಾಂಚಿ ದೀಪಾ ಪಿಂಪಟೆ, ಮಾಜಿ ಅಧ್ಯೆ ಶೋಭಾರಾಣಿ ಪಾಠಕ, ಐಎಸ್ಒ ಮಾಜಿ ಅಧ್ಯೆ ಪ್ರೇಮಾ ಪಾಟೀಲ, ಸಹ& ಕಾರ್ಯದರ್ಶಿ ಮಮತಾ ಪಾಟೀಲ, ಶಿಬಿರದ ಚೇರ್ಮನ್ ರೇಷ್ಮಾ ಭಾಗವತ, ಸದಸ್ಯರು ಮತ್ತು ಮಹಾವೀರ ಲಿಂಬ್ ಸೆಂಟರ್ ಸಂಸ್ಥಾಪಕ ಅಧ್ಯ ಮಹೇಂದ್ರ ಸಿಂಘಿ ಇತರರು ಉಪಸ್ಥಿತರಿದ್ದರು.

ಜ್ಯೋತಿ ಭಜ್ಜಿ, ಎಲ್ವಿನಾ ಪ್ಲೊರೆನ್ಸ, ವೃಷಾಲಿ ಹಂಚಾಟೆ, ನಮಿತಾ ಮಿರಜಾನಕರ, ಕವಿತ ಸಾವಲಗಿ, ಉಮಾ ಕುಡಗಿ, ನಿರ್ಮಲಾ ರೂಡಗಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net