ಕೃತಕ ಕಾಲು ಉಚಿತ ವಿತರಣೆ

8
Published on

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಫ್ರೀಡಂ ಟ್ರಸ್ಟ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಉಚಿತ ಕೃತಕ ಕಾಲು ಜೋಡಣೆ ಹಾಗೂ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಗರದ ಸಿಎಸ್‌ಐ ವೆಸ್ಲಿ ಮಹಾ ದೇವಾಲಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 148 ಫಲಾನುಭವಿಗಳಿಗೆ ಉಚಿತ ಕೃತಕ ಕಾಲು ವಿತರಣೆ ಮಾಡಲಾಯಿತು. ಮೂಳೆ ಶಸ್ತ್ರ ಚಿಕಿತ್ಸಕ ಡಾ.ಎಂ.ಆರ್.ಸೀತಾರಾಮ್, ಫ್ರೀಡಂ ಟ್ರಸ್ಟ್‌ನ ಸಲಹೆಗಾರ ರವಿ ಅಯ್ಯಂಗಾರ್, ಡಾ.ಮಜೀದ್ ಫೌಂಡೇಷನ್‌ನ ನಿರ್ದೇಶಕಿ ಡಾ.ಅಂಜು ಮಜೀದ್, ಎಂ.ಪಿ.ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net