ಕರಡಿಗೆ ಕೃತಕ ಕಾಲು ಜೋಡಣೆ!

18 09 2025_BGR RURAL_PAGE_2
Published on

ಆನೇಕಲ್​ : ವಿಶ್ವದಲ್ಲೇ ಮೊದಲ ಬಾರಿ ಕರಡಿಗೆ ಶಸಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಕೃತಕ ಕಾಲು ಜೋಡಣೆ ಮಾಡಿದ ಹೆಗ್ಗಳಿಕೆಗೆ ಬನ್ನೇರುಟ್ಟ ರಾಷ್ಟ್ರೀಯ ಉದ್ಯಾನ ಪಾತ್ರವಾಗಿದೆ. ಬಳ್ಳಾರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 2019ರಲ್ಲಿ ಬೇಟೆಗಾರರ ಬಲೆಗೆ ಸಿಲುಕಿ ಕರಡಿಯ ಹಿಂಬದಿ ಎಡಗಾಲು ಮುರಿದು ನಡೆಯಲು ಆಗದ ಪರಿಸ್ಥಿತಿಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ 'ವಸಿಕರನ್​' ಹೆಸರಿನ ಕರಡಿಯನ್ನು ರಸಿ ಬನ್ನೇರುಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಕರೆ ತರಲಾಗಿತ್ತು.

ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಆರೋಗ್ಯ ಸುಧಾರಣೆಯಾಗಿತ್ತು. ಮೂರು ಕಾಲಿನಲ್ಲಿ ನಡೆಯುವ ಅಭ್ಯಾಸ ರೂಢಿಸಿಕೊಳ್ಳುತ್ತಿತ್ತು. ಜನವರಿಯಲ್ಲಿ ಬನ್ನೇರುಟ್ಟ ಉದ್ಯಾನಕ್ಕೆ ಭೇಟಿ ನೀಡಿದ್ದ ಪ್ರಾಣಿಗಳ ಜಾಗತಿಕ ಮೂಳೆ ತ ಅಮೆರಿಕದ ಡೆರಿಕ್​ ಕಂಪನಾ "ವಸಿಕರನ್​' ನಡಿಗೆಯನ್ನು ಗಮನಿಸಿದ್ದರು. ಕರಡಿ ಮರ ಹತ್ತಲು, ಮೇವು ಸಂಗ್ರಹಕ್ಕೆ ಪಡುತ್ತಿರುವ ಕಷ್ಟವನ್ನು ಕಂಡು ಬನ್ನೇರುಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ವೈಲ್ಡ್​ ಲೈಫ್​ ಎಸ್​ಒಎಸ್​ ಮೂಲಕ ಉದ್ಯಾನದ ಕರಡಿ ರಕ್ಷಣಾ ಕೇಂದ್ರದಲ್ಲಿ ಕೃತಕ ಕಾಲಿನ ಅಚ್ಚು, ಪರೀಕ್ಷೆ, ಅದರ ಲಯಬದ್ಧವಾದ ಜೋಡಣೆ ಪರೀಸಿದ ಬಳಿಕ ವಸಿಕರನ್​ಗೆ ಕೃತಕ ಕಾಲು ಜೋಡಣೆ ಯಶಸ್ವಿಯಾಗಿ ನೆರವೇರಿಸಲಾಯಿತು.

ಚಟುವಟಿಕೆಯಲ್ಲಿ ಸಕ್ರಿಯ : ಬೇರೆ ಪ್ರಾಣಿಗಳಂತೆ ಕರಡಿಗೆ ಕೃತಕ ಜೋಡಣೆ ಸವಾಲಿನ ಕೆಲಸವಾಗಿತ್ತು. ಜೋಡಣೆ ಬಳಿಕ ಕರಡಿಯು ಮತ್ತೆ ಮೊದಲಿನಂತೆ ಮರ ಏರುವುದು, ನೆಲ ಕೆರೆಯುವುದು ಸೇರಿ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿದ್ದು, ನೆಮ್ಮದಿಯ ವಿಚಾರ ಎಂದು ಪ್ರಾಣಿಗಳ ಜಾಗತಿಕ ಮೂಳೆ ತ ಅಮೆರಿಕದ ಡೆರಿಕ್​ ಕಂಪನಾ ತಿಳಿಸಿದರು.

ಇರುವೆ, ಗೆದ್ದಲು ಹುಳುಗಳನ್ನು ತಿನ್ನಲು ಕಾಲಿನ ಉಗುರು ಬಳಸುತ್ತಿದ್ದ ಹಾಗೂ ಮರವೇರುತ್ತಿದ್ದ 16 ವರ್ಷದ ಕರಡಿಗೆ ಸರಿಯಾಗಿ ನಡೆದಾಡಲು ಆಗದ ಪರಿಸ್ಥಿತಿ ಉಂಟಾಗಿತ್ತು. ಕೃತಕ ಕಾಲಿನ ಜೋಡಣೆ ಯಶಸ್ವಿಯಾಗಿ ಮಾಡುವ ಅಮೆರಿಕಾದ ಖ್ಯಾತ ವೈದ್ಯ ಡೆರಿಕ್​ ಅವರನ್ನು ಸಂಪರ್ಕಿಸಿ ಜನವರಿ ತಿಂಗಳಲ್ಲಿ ಮಾಹಿತಿ ಒದಗಿಸಿದ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ ಕರಡಿಯ ಇನ್ನೊಂದು ಕಾಲಿನ ಮಾದರಿ ಪಡೆದು ಕೃತಕ ಕಾಲು ಜೋಡಣೆ ಮಾಡಲಾಗಿದೆ. ವಾರದಲ್ಲಿ ಮೂರು ದಿನಗಳ ಅಳವಡಿಸಿ ವೀಸಲಾಗುತ್ತಿದೆ.

| ಬಾ.ಅರುಣ್​ ಶಾ ವೈಲ್ಡ್​ ಲೈಫ್​ ಎಸ್​ಒಎಸ್​ ಸಂಸ್ಥೆಯ ಹಿರಿಯ ವೈದ್ಯಾಧಿಕಾರಿ

ಬನ್ನೇರುಟ್ಟ ರಾಷ್ಟ್ರೀಯ ಉದ್ಯಾನದಲ್ಲಿ 55 ಕರಡಿಗಳಿವೆ, ಅವುಗಳ ವಯಸ್ಸು ಸುಮಾರು 25 ರಿಂದ 30 ಮೀರುತ್ತಿದ್ದು, ಸ್ವಾಭಾವಿಕವಾಗಿ ಸಾವನ್ನಪ್ಪುವುದು ಸಾಮಾನ್ಯವಾಗಿದೆ. ಮನುಷ್ಯರಿಗೇ ಆಗಲಿ, ಪ್ರಾಣಿಗಳಿಗೆ ಆಗಲಿ ಕೃತಕ ಕಾಲು ಜೋಡಣೆ ಬಳಿಕ ಹೊಂದಿಕೊಳ್ಳಲು ಸಮಯಬೇಕು. ನಿಗಾ ವಹಿಸಿ ನೋಡಿಕೊಳ್ಳಲಾಗುತ್ತಿದೆ.

| ಎ.ವಿ.ಸೂರ್ಯಸೇನ್​ ಬನ್ನೇರುಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net