

ಮೂಲ್ಕಿ: ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಾಯರ್ ಜಿಲ್ಲಾ ವ್ಯಾಪ್ತಿಯಲ್ಲಿ ಉತ್ತಮ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು ಸತತವಾಗಿ ಮೂರು ವರ್ಷಗಳಿಂದ ಲಯನ್ಸ್ ಜಿಲ್ಲೆಯಲ್ಲಿ ಮೊದಲಿನ ಸ್ಥಾನ ಪಡೆದಿದೆ ಎಂದು ಲಯನ್ಸ್ ಪ್ರಾಂತ್ಯ10ರ ವಲಯ್ಯಧ್ಯಕ್ಷ ಮೇಲ್ವಿನ್ ಸಲ್ದಾನ ಹೇಳಿದರು.
ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಲಯನ್ಸ್ ಕೃತಕ ಕಾಲು ಜೋಡನ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಾಯರ್ ವತಿಯಿಂದ ಮೂಲ್ಕಿ ಕಾರ್ನಾಡಿನ ನಿವಾಸಿ ಉಮೇಶ್ ಕೋಟ್ಯಾನ್ ಅವರಿಗೆ ಕೃತಕ ಕಾಲು ಹಸ್ತಾಂತರಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಾಯರ್ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಕಾರ್ಯದರ್ಶಿ ಅಶ್ವಿನಿ ಶರ್ಮ ಮಾಜಿ ವಲಯಾಧ್ಯಕ್ಷರಾದ ಪ್ರತಿಭಾ ಹೆಬ್ಬಾರ್, ಶರತ್, ಲಯನ್ಸ್ ಕ್ಲಬ್ ಮಂಗಳೂರು ಸದಸ್ಯ ಸುರೇಶ್ ಉಪಸ್ಥಿತರಿದ್ದರು.