ಕೃತಕ ಬುದ್ಧಿಮತ್ತೆ ಬಳಕೆಯಿಂದ ಸಮಯ ಉಳಿತಾಯ

03 Jaggu 2
ಬೆಳಗಾವಿ ವಾರ್ತಾ ಇಲಾಖೆ ಸಭಾಭವನದಲ್ಲಿ ಸೋಮವಾರ ಪತ್ರಕರ್ತರಿಗಾಗಿ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮ’ ವಿಶೇಷ ಕಾರ್ಯಾಗಾರದಲ್ಲಿ ಸ್ವಪ್ನಿಲ್ ಪಾಟ್ನೇಕರ್ ಮಾತನಾಡಿದರು.ಗುರುನಾಥ ಕಡಬೂರ, ರವೀಂದ್ರ ಉಪ್ಪಾರ,ವಿಲಾಸ ಜೋಶಿ, ಮಹೇಶ ವಿಜಾಪುರ ಇತರರಿದ್ದರು.
Published on

ಬೆಳಗಾವಿ: ವಾರ್ತಾ ಇಲಾಖೆ ಮತ್ತು ಬೆಳಗಾವಿ ಪತ್ರಕರ್ತರ ಬಳಗದ ವತಿಯಿಂದ ‘ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮ’ ವಿಷಯದ ಕುರಿತಂತೆ ಪತ್ರಕರ್ತರಿಗೆ ವಾರ್ತಾ ಇಲಾಖೆ ಸಭಾಭವನದಲ್ಲಿ ಸೋಮವಾರ ವಿಶೇಷ ಕಾರ್ಯಾಗಾರ ಜರುಗಿತು.

ಕಾರ್ಯಾಗಾರದಲ್ಲಿ ಬೆಳೆಗಾವಿಯ ಶ್ರೇಷ್ಠಾ ಐಟಿ ಕಂಪನಿ ಸಂಸ್ಥಾಪಕ ಸ್ವಪ್ನಿಲ್ ಪಾಟ್ನೇಕರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿ ಪತ್ರಕರ್ತರ ಪ್ರಶ್ನೆಗಳಿಗೆ ವಿವರವಾಗಿ ಉತ್ತರ ನೀಡಿದರು.

ಈ ವೇಳೆ ಪಾಟ್ನೇಕರ ಚಾಟ್ ಜಿಪಿಟಿ, ಡೀಪ್ಸೀಕ್, ಗ್ರಾಮರ್ಲಿ ಮತ್ತು ಇತರ ಹಲವಾರು ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಟೂಲ್ಗಳನ್ನು ಪರಿಣಾಮಕಾರಿಯಾಗಿ ಹೇಗೆ ಬಳಸುವುದು ಮತ್ತು ಇಂಟರ್ನೆಟ್ ಇಲ್ಲದೆಯೇ ಅವುಗಳನ್ನು ಬಳಸುವ ಬಗೆ ಹೇಗೆ ಎನ್ನುವುದನ್ನು ತಿಳಿಸಿದರು. ಜತೆಗೆ ಕೃತಕ ಬುದ್ಧಿಮತ್ತೆ ಬಳಸುವ ಲಾಭಗಳು ಮತ್ತು ಅಪಾಯಗಳನ್ನು ಪ್ರಾಯೋಗಿಕವಾಗಿ ತಿಳಿಸಿದರು.

ಹಿರಿಯ ಪತ್ರಕರ್ತ ರಿಷಿಕೇಶ ಬಹದ್ದೂರ್ ದೇಸಾಯಿ ಮಾತನಾಡಿ, ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಇಂದಿನ ಪತ್ರಕರ್ತರು ಕೃತಕ ಬುದ್ಧಿಮತ್ತೆಯ ಟೂಲ್ಗಳನ್ನು ಕಲಿಯಬೇಕು. ಇದರಿಂದ ಕೆಲಸದ ಗುಣಮಟ್ಟ ಹೆಚ್ಚಾಗಿ ಸಮಯ ಕಡಿಮೆ ತೆಗೆದುಕೊಳ್ಳುತ್ತದೆ ಎಂದರು.

ಕೃತಕ ಬುದ್ಧಿಮತ್ತೆಯ ಪ್ರಭಾವ ಎಲ್ಲ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತಿದ್ದು, ಮಾಧ್ಯಮ ಕ್ಷೇತ್ರವೂ ಇದಕ್ಕೆ ಹೊರತಾಗಿ ಉಳಿದಿಲ್ಲ. ಸ್ವಪ್ನಿಲ್ ಪಾಟ್ನೇಕರ್ ಅವರು ‘ಸೈಬರ್ ಸೆಕ್ಯೂರಿಟಿ ಮತ್ತು ಥ್ರೆಟ್ ಡಿಟೆಕ್ಷನ್’ ಕುರಿತಂತೆ ಪೊಲೀಸ್ ಇಲಾಖೆ ಮತ್ತು ದೇಶ ವಿದೇಶದಲ್ಲಿನ ಇಂಟೆಲಿಜೆನ್ಸ್ ಏಜೆನ್ಸಿಗಳಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ಉಪ್ಪಾರ ವಂದಿಸಿದರು. ಹಿರಿಯ ಪತ್ರಕರ್ತರಾದ ವಿಲಾಸ ಜೋಶಿ, ಶ್ರೀಶೈಲ ಮಠದ, ಸಂಜಯ ಸೂರ್ಯವಂಶಿ, ರಾಜು ಗವಳಿ, ಮಹೇಶ ವಿಜಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net