ಕೃತಕ ಬುದ್ಧಿಮತ್ತೆ ಶಕ್ತಿಯುತ ಸಾಧನ

20 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೃತಕ ಬುದ್ಧಿಮತ್ತೆಯು ಒಂದು ಶಕ್ತಿಯುತ ಸಾಧನವಾಗಿದ್ದು, ಅದನ್ನು ನೈತಿಕತೆಯಿಂದ ಸೃಜನಾತ್ಮಕ ಮತ್ತು ನಾವಿನ್ಯತೆಯೊಂದಿಗೆ ಬಳಸಬೇಕು ಎಂದು ಎಸ್​ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನಕುಮಾರ್​ ಹೇಳಿದರು.

ಎಸ್​ಡಿಎಂ ವೈದ್ಯಕಿಯ ಮಹಾವಿದ್ಯಾಲಯದ ಸೂಕ್ಷ್ಮಾಣುಜೀವಿ ಶಾಸ್ತ್ರ ವಿಭಾಗವು ಕೃತಕ ಬುದ್ಧಿ ಮತ್ತೆಯೊಂದಿಗೆ ನಿಮ್ಮ ಸಂಶೋಧನೆ ಪರಿವರ್ತಿಸಿ ಎಂಬ ಧ್ಯೇಯೆಯೊಂದಿಗೆ ಇತ್ತೀಚೆಗೆ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ಆಧರಿತ ಸಂಶೋಧನಾ ವರ್ತಮಾನ ಮತ್ತು ಭವಿಷ್ಯದ ಸಾಧನ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೃತಕ ಬುದ್ಧಿ ಮತ್ತೆಯು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಮತ್ತು ಅಧ್ಯಯನಕ್ಕೆ ಸಹಕಾರಿಯಾಗಿದೆ. ಕೃತಕ ಬುದ್ಧಿಮತ್ತೆ ಒಂದು ಮಹಾನ್​ ಶಕ್ತಿಯಾಗಿದ್ದು, ಅದನ್ನು ನಾವು ಜಾಗರೂಕತೆಯಿಂದ ಬಳಸಬೇಕು. ಪ್ರಸ್ತುತ ಬೋಧನಾ ವಿಧಾನ ಮತ್ತು ಕೃತಕ ಬುದ್ಧಿಮತ್ತೆ ಜತೆಗೆ ಸಾಗಬೇಕು ಎಂದರು.

ಡಾ. ಶಾರೂನ್​ ಬೈಸಿಲ್​ ಮತ್ತು ಡಾ. ರೋಹಿತ ಕೃತಕ ಬುದ್ಧಿಮತ್ತೆ ಕುರಿತು ಉಪನ್ಯಾಸ ನೀಡಿದರು. ರಾಜ್ಯದ 75ಕ್ಕೂ ಹೆಚ್ಚು ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ ಮಾತನಾಡಿದರು. ಸಹ ಉಪ ಕುಲಪತಿ ವಿ. ಜೀವಂಧರ ಕುಮಾರ, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ್​, ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಸಂಶೋಧನಾ ನಿರ್ದೇಶಕ ಡಾ.ಕೆ. ಸತ್ಯಮೂರ್ತಿ , ಡಾ. ಅಜಂತಾ ಜಿ.ಎಸ್​, ಡಾ. ಕವಿತಾ ಯೇವೂರ, ಡಾ. ರಾವೇಂದ್ರ ಕುಲಕರ್ಣಿ, ಅಂಗ ಸಂಸ್ಥೆಗಳ ಮುಖ್ಯಸ್ಥರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net