ಕಲೆಗಳ ಉಳಿವಿಗೆ ಪ್ರೋತ್ಸಾಹ ಅಗತ್ಯ

20ALD 02
ಅಳವಂಡಿ ಸಮೀಪದ ತಿಗರಿ ಗ್ರಾಮದಲ್ಲಿ ಶ್ರೀತಾಯಮ್ಮದೇವಿ ಕಾರ್ತಿಕೋತ್ಸವದ ಅಂಗವಾಗಿ ನಡೆದ ‘ಮೂರು ದಿನದ ಸಂತೆ’ ಎಂಬ ನಾಟಕ ಪ್ರದರ್ಶನಕ್ಕೆ ಮುಖಂಡರು ಚಾಲನೆ ನೀಡಿದರು. ಪ್ರಮುಖರಾದ ಹಾಲಯ್ಯಸ್ವಾಮಿ, ಭೀಮನಗೌಡ, ಹನುಮಗೌಡ, ರಮೇಶ, ಶಕರ, ಮಹೇಶ, ಮಲ್ಲಪ್ಪ, ಸುಭಾಷ, ಗವಿಸಿದ್ದಪ್ಪ ಇತರರಿದ್ದರು.
Published on

ಅಳವಂಡಿ: ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ಜತೆಗೆ ಪರಿವರ್ತನೆಗೆ ಕಾರಣವಾಗುತ್ತವೆ ಎಂದು ಮುಖಂಡ ಹೇಮರಡ್ಡಿ ನಾಗರಳ್ಳಿ ತಿಳಿಸಿದರು.

ಸಮೀಪದ ತಿಗರಿ ಗ್ರಾಮದಲ್ಲಿ ಶ್ರೀತಾಯಮ್ಮದೇವಿ ಕಾರ್ತಿಕೋತ್ಸವದ ಅಂಗವಾಗಿ ಶ್ರೀತಾಯಮ್ಮದೇವಿ ನಾಟ್ಯ ಸಂಘದವರಿಂದ ಜರುಗುವ ‘ಮೂರು ದಿನದ ಸಂತೆ’ ಎಂಬ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

ನಾಟಕ, ಬಯಲಾಟ, ಜಾನಪದ ಗೀತೆ, ತೊಗಲು ಗೊಂಬೆಯಾಟ ಮುಂತಾದ ಕಲೆಗಳು ಉಳಿಯಲು ಎಲ್ಲರ ಪ್ರೋತ್ಸಾಹ ಹಾಗೂ ಬೆಂಬಲದ ಅಗತ್ಯವಿದೆ. ಸಂಗೀತ ಹಾಗೂ ಜನಪದಕಲೆಗಳು ಉತ್ಸಾಹವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತವೆ ಎಂದರು.

ಪ್ರಮುಖರಾದ ಹಾಲಯ್ಯಸ್ವಾಮಿ ಸಾಲಿಮಠ, ಬೀಮನಗೌಡ ದಳಪತಿ, ರಮೇಶ ಬಿಸರಳ್ಳಿ, ಶಂಕರ ಅಂಬಳಿ, ದುರಗಪ್ಪ ಹರಿಜನ, ಪ್ರಭು ಅಂಬಿಗೇರ, ಶಿದ್ಲಿಂಗಯ್ಯ ಮತ್ತೂರು, ಭೀರಪ್ಪ ಬಿಸರಳ್ಳಿ, ಸುಭಾಷ ಹನುಮನಾಳ, ಗವಿಸಿದ್ದಪ್ಪ ಅಗಸಿಮನಿ, ಹನುಮಗೌಡ ಪೊಲೀಸ್‌ಪಾಟೀಲ್, ಮಲ್ಲಪ್ಪ ಅಂಬಿಗೇರ, ಮಹೇಶ ಶಿಗನಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net