

ಹುಬ್ಬಳ್ಳಿ: ನಗರದ ಕಾವೇರಿ ಕಾಲನಿಯಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ನಲ್ಲಿ ಸೆ. 6ರಂದು ಬೆಳಗ್ಗೆ 10.30ಕ್ಕೆ ಹು-ಧಾ ಸಂಗೀತ ಕಲಾವಿದರ, ಕಲಾಸಕ್ತರ ಮತ್ತು ಕಲಾ ಸಂಘಟಕರ ಸಭೆ ಏರ್ಪಾಟಾಗಿದೆ.
ಪದ್ಮಶ್ರೀ ಪಂ. ವೆಂಕಟೇಶಕುಮಾರ, ಪಂ. ಕೈವಲ್ಯಕುಮಾರ ಗುರವ, ಪಂ. ಗಣಪತಿ ಭಟ್ ಹಾಸಣಗಿ, ವಿದೂಷಿ ಅಕ್ಕಮಹಾದೇವಿ ಮಠ, ವಿದೂಷಿ ವಿಜಯಾ ಜಾಧವ ಗಾಟ್ಲೆವಾರ್, ರಂಗಕರ್ವಿು ಡಾ. ಶಶಿಧರ ನರೇಂದ್ರ, ಶ್ರೀ ಧರ ಮಾಂಡ್ರೆ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.