ಕಲೆ, ಸಾಹಿತ್ಯದ ಅರಿವು ಮುಖ್ಯ

2KADABI1
Published on

ಕಡಬಿ: ಸಂಸತಿ, ಪರಂಪರೆಯಲ್ಲಿ ರಂಗಭೂಮಿಗೆ ಪ್ರಮುಖ ಸ್ಥಾನವಿದೆ. ದೇಶಿಯ ಕಲೆ ಹಾಗೂ ಸಾಹಿತ್ಯ ಬಗ್ಗೆ ಯುವ ಪೀಳಿಗೆಯಲ್ಲಿ ಅರಿವು ಮೂಡಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಗ್ರಾಮದ ಶ್ರೀ ಲ$್ಮದೇವಿ ಹಾಗೂ ಮಡಿವಾಳೇಶ್ವರ ಜಾತ್ರೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕರ್ಮದ ಕೂಸಿಗೆ ಧರ್ಮದ ತೊಟ್ಟಿಲು ಎಂಬ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಸೊಗಡಿನ ಚಿಂತನೆ ಹಾಗೂ ಮೌಲ್ಯಗಳ ಕುರಿತಾಗಿ ನಾಟಕದ ಮೂಲಕ ಸಮಾಜಕ್ಕೆ ಸಂದೇಶ ಸಾರುತ್ತಿರುವ ಕಲಾವಿದರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಪ್ರತಿಭಾವಂತ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.

ತಾಪಂ ಮಾಜಿ ಉಪಾಧ್ಯ ಛಾಯಪ್ಪ ಹುಂಡೇಕಾರ ಮಾತನಾಡಿ, ಪರಸ್ಪರ ಸಹಕಾರ ಹಾಗೂ ಪ್ರೋತ್ಸಾಹ ದೊರೆತರೆ ಮಾತ್ರ ಕಲಾವಿದನ ಕಲೆಗೆ ಬೆಲೆ ಬರಲು ಸಾಧ್ಯವಾಗುತ್ತದೆ. ಆಧುನಿಕ ಭರಾಟೆಯಿಂದ ರಂಗಭೂಮಿ ತೆರೆಮರೆಗೆ ಸರಿಯುತ್ತಿದ್ದು ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಗ್ರಾಪಂ ಅಧ್ಯ ಕೀರಪ್ಪ ಸುಣಧೋಳಿ, ಎಪಿಎಂಸಿ ಅಧ್ಯ ನೀಲಕಂಠ ಸಿದ್ದಬಸನ್ನವರ, ಗ್ರಾಪಂ ಸದಸ್ಯರಾದ ಲ$್ಮಣ ಕುಂಟಿರಪ್ಪಗೋಳ, ಗಂಗಪ್ಪ ಮೀಶಿ, ಪ್ರಕಾಶ ವಾಲಿ, ಕಿಟ್ಟು ಹುಂಡೇಕಾರ, ನಕುಲ ಮಾಳೈನ್ನವರ, ಲ$್ಮಣ ಮಾಳೈನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net