ಎಸ್‌ಡಿಎಂನಲ್ಲಿ ಕಲಿಕೆಯಲ್ಲಿ ಕಲೆ ಕಾರ್ಯಾಗಾರ

Bel_Art-in-learning
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ ’ಕಲಿಕೆಯಲ್ಲಿ ಕಲೆ’ ಕಾರ್ಯಾಗಾರ ನಡೆಯಿತು.

ಬ್ರಹ್ಮಾವರದ ಎಸ್.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅಭಿಲಾಷ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಕಲಿಕೆಯಲ್ಲಿ ಕಲೆಯನ್ನು ಅಳವಡಿಸುವ ವಿಷಯಗಳ ಕುರಿತಾಗಿ ಪ್ರಾಯೋಗಿಕ ಮಾಹಿತಿ ಹಂಚಿಕೊಂಡರು.

ವಿಶೇಷವಾಗಿ ನಾಟಕ ಪೂರ್ವರಂಗದ ಮೂಲಕ ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳನ್ನು ಸ್ವಾಗತಿಸಿದರು.

ಕಾರ್ಯಾಗಾರದಲ್ಲಿ ಅಭಿಲಾಷ್ ಅವರ ವಿದ್ಯಾರ್ಥಿನಿ ಕಾವ್ಯ ಹಂದೆ ತರಗತಿಗಳಲ್ಲಿ ಮಾಡಬಹುದಾದ ಅನೇಕ ಚಟುವಟಿಕೆಗಳು ಹಾಗೂ ನಾಟಕಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ವಿವಿಧ ಸಿ.ಬಿ.ಎಸ್.ಇ ಶಾಲೆಗಳ ಶಿಕ್ಷಕರು ಭಾಗವಹಿಸಿದರು. ಶಿಕ್ಷಕಿ ಕಲ್ಯಾಣಿ ರಾವ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net