ಕಲೆಗೆ ಜಾತಿ ಮತ ಧರ್ಮ ಲಿಂಗಬೇಧ ಇಲ್ಲ

ಕಲೆಗೆ ಜಾತಿ ಮತ ಧರ್ಮ ಲಿಂಗಬೇಧ ಇಲ್ಲ
Published on

ಶನಿವಾರಸಂತೆ: ಮನುಷ್ಯನ ಬದುಕಿಗೆ ಬೇಕಾದ ಮೌಲ್ಯಗಳು ಭಾರತೀಯ ಸಂಸ್ಕಾರದಲ್ಲಿ ಸಿಗುತ್ತದೆ ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ.ಜಯಕುಮಾರ್ ಹೇಳಿದರು.

ಶನಿವಾರಸಂತೆ ಶ್ರೀ ಲಲಿತ ನಾಟ್ಯಾಲಯ ಅಕಾಡೆಮಿ ಆಫ್ ಕ್ಲಾಸಿಕಲ್ ಡ್ಯಾನ್ಸೆಸ್ ಸಂಸ್ಥೆ ವಾರ್ಷಿಕೋತ್ಸವ ಅಂಗವಾಗಿ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನೃತ್ಯ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವದ ಎಲ್ಲೆಡೆಯಲ್ಲೂ ಭಾರತೀಯ ಸಂಸ್ಕೃತಿಯನ್ನು ಮೆಚ್ಚುತ್ತಾರೆ. ಶಾಸ್ತ್ರಿಯ ನೃತ್ಯ, ಸಂಗೀತ ಮುಂತಾದ ಸಂಸ್ಕೃತಿಯನ್ನು ಭಾರತ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ. ಮನುಷ್ಯನ ಬದುಕಿಗೆ ಬೇಕಾಗಿರುವ ಮೌಲ್ಯಗಳು ಸಹ ಭಾರತೀಯ ಸಂಸ್ಕಾರಗಳ ಮೂಲಕ ಸಿಗುತ್ತದೆ ಎಂದು ಹೇಳಿದರು.

ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಭರತ ನಾಟ್ಯವು ಒಂದಾಗಿದ್ದು, ಈ ಕಲೆಯು ದೇವರಿಗೆ ಪ್ರಿಯವಾದ ಕಲೆಯಾಗಿದೆ. ಪರಶಿವನು ಸ್ವತ: ನಾಟ್ಯ ಪ್ರವೀಣನಾಗಿದ್ದು ಇದು ಶಿವ ತಾಂಡವ ನೃತ್ಯ ಎಂದೆ ಪ್ರಸಿದ್ದಿ ಪಡೆದಿದೆ ಎಂದರು. ಕಲೆಗೆ ಜಾತಿ ಮತ ಧರ್ಮ ಲಿಂಗಬೇಧ ಇಲ್ಲದೆ ಎಲ್ಲಾರಿಗೂ ಅನ್ವಯವಾಗುವ ವಿದ್ಯೆಯಾಗಿದೆ. ಆದರೆ ಇಂದು ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಯನ್ನು ಮೊರೆ ಹೋಗುತ್ತಿದ್ದಾರೆ ಇಂತಹ ವಿದ್ಯಾಮಾನದ ನಡುವೆ ನೃತ್ಯಗುರು ಸುನಿತಾ ಶೆಟ್ಟಿ ಅವರು ಭರತ ನಾಟ್ಯ ಶಾಲೆಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ಕಲಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಕುಶಾಲನಗರದ ಹಿರಿಯ ನೃತ್ಯ ವಿದ್ವಾನ್ ಶಂಕರಯ್ಯ ಮಾಸ್ತರ್, ಗೀತಾ, ಲಲಿತ ನೃತ್ಯಾಲಯದ ಸುನಿತಾ ಶೆಟ್ಟಿ ಇದ್ದರು. ನೃತ್ಯ ಸೌರಭದಲ್ಲಿ ನೃತ್ಯ ಗುರು ಸನಿತಾ ಶೆಟ್ಟಿ ಸೇರಿದಂತೆ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net