ಮಾ.1,2ಕ್ಕೆ ಶಿಕ್ಷಣಕ್ಕಾಗಿ ಕಲೆ ಕಾರ್ಯಕ್ರಮ ; ರೋಟರಿ ಕ್ಲಬ್ ಆಯೋಜನೆ

Published on

ಬೆಂಗಳೂರು: ದುರ್ಬಲ ವರ್ಗದ ಮಕ್ಕಳಿಗೆ ಉಜ್ವಲ ಭವಿಷ್ಯ ನೀಡುವ ಉದ್ದೇಶದಿಂದ ಬೆಂಗಳೂರು ರೋಟರಿ ಕ್ಲಬ್ ಶಿಕ್ಷಣಕ್ಕಾಗಿ ಕಲೆ (ಕಲಾ ಫಾರ್ ವಿದ್ಯಾ) ವಾರ್ಷಿಕ ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಮಾ.1 ಮತ್ತು 2ಕ್ಕೆ ಹಮ್ಮಿಕೊಂಡಿದೆ.

ಐಟಿಸಿ ವಿಂಡ್ಸರ್‌ನಲ್ಲಿ ಅಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಕಾರ್ಯಕ್ರಮ ನಡೆಯಲಿದೆ. 2005ರಲ್ಲಿ ಆರಂಭವಾದ ಕಾರ್ಯಕ್ರಮವು ಜನ ಮೆಚ್ಚುಗೆ ಪಡೆದಿದ್ದು, ಈ ಕಾರ್ಯಕ್ರಮವನ್ನು ಹಿಂದುಳಿದ ಹಾಗೂ ಸಮಾಜದಲ್ಲಿನ ದುರ್ಬಲ ವರ್ಗದ ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಂಡ್ ರೈಸಿಂಗ್ ಉದ್ದೇಶ ಹೊಂದಿದೆ.

ಪ್ರತಿವರ್ಷ ಒಂದೊಂದು ಪರಿಕಲ್ಪನೆಯಲ್ಲಿ ಕಲಾವಿದರು ತಮ್ಮ ಕೈಚಳಕ ತೋರುತ್ತಿದ್ದು, ಈ ವರ್ಷ ‘ಅಲ್ಪಕಾಲಿಕ ಶಾಶ್ವತತೆ, ನಿಸರ್ಗದ ಕಥೆಗಳು’ ಎಂಬ ಥೀಮ್‌ನಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸುವ ಕಲಾವಿದರು ರಚಿಸುವ ಕಲೆಗಳನ್ನು ಪ್ರದರ್ಶಿಸಲಾಗುವುದು. ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಕಲೆಗಳಿಂದ ಹಿಡಿದು ಸಮಕಾಲೀನ ಕಲೆಗಳವರೆಗಿನ ವೈವಿಧ್ಯಪೂರ್ಣ ಕಲಾ ಪ್ರಕಾರಗಳನ್ನು ಕಲಾವಿದರು ರಚಿಸಲಿದ್ದಾರೆ.

ರೋಟರಿ ಬೆಂಗಳೂರು ವಿದ್ಯಾಲಯದಲ್ಲಿ ಹಿಂದುಳಿದ ಹಾಗೂ ಸಮಾಜದಲ್ಲಿನ ದುರ್ಬಲ ವರ್ಗದ 540 ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉಚಿತ ಸಮವಸ್ತ್ರ, ಆಹಾರ ಮತ್ತು ಪುಸ್ತಕಗಳನ್ನು ಪೂರೈಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net