ಚಿನ್ಮಯ ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶನ ವೀಕ್ಷಣೆ

IMG_20250702_213843_717.jpg
Published on

ಹುಬ್ಬಳ್ಳಿ: ಇಲ್ಲಿಯ ಸರ್ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿರುವ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಚಿತ್ರಕಲಾ ಪ್ರದರ್ಶನಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.

ಜುಲೈ ತಿಂಗಳಾಂತ್ಯದವರೆಗೆ ನಡೆಯುವ ಪ್ರದರ್ಶನ ವೀಕ್ಷಿಸಲು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ನಗರದ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳು ಮಂಗಳವಾರ ಚಿತ್ರಕಲಾ ಪ್ರದರ್ಶನ ವೀಕ್ಷಣೆ ಮಾಡಿ ಖುಷಿ ಪಟ್ಟರು.

ವಿವಿಧ ಕಲಾಕೃತಿಗಳನ್ನು ನೋಡಿದ ಮಕ್ಕಳು ತಮ್ಮ ಭಾವನೆಗಳನ್ನು ಹಂಚಿಕೊಂಡರು. ಮಹಾವಿದ್ಯಾಲಯದ ಪ್ರಾಚಾರ್ಯ ಹಿರೇಗೌಡರ, ಕಲಾವತಿ, ಡಾ. ಪ್ರತಾಪ ಬಹುರೂಪಿ, ಡಾ. ಚಂದ್ರಕಾಂತ ಜೆಟ್ಟನ್ನವರ ಅವರು ಪ್ರದರ್ಶನ ಕುರಿತು ಮಾಹಿತಿ ನೀಡಿದರು.

ಮಕ್ಕಳು ತಮ್ಮ ಭಾವನೆ ವ್ಯಕ್ತಪಡಿಸುತ್ತಿರುವದನ್ನು ನೋಡಿದರೆ ಇವರಲ್ಲಿಯೂ ಕಲೆ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆಸಕ್ತಿಯ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಿ ಬದುಕು ಕಟ್ಟಿಕೊಳ್ಳಬಹುದು ಎಂದು ಅಧ್ಯಾಪಕರು ಸಲಹೆ ನೀಡಿದರು.

ಶಿಕ್ಷಕರಾದ ರಾಜಶೇಖರ ಮಾಣಿಕ್ಯ, ಪೂಜಾ ಹೂಗಾರ, ಕೃಷ್ಣಪ್ಪ ಮಲ್ಲಣ್ಣವರ, ಸೋನಿ ಕಟ್ಟಿಮನಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net