

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂವು ಫೆ. 12ರಂದು ಸಂಜೆ 5 ಗಂಟೆಗೆ ಡಾ. ಬಸವರಾಜ ಕಲೆಗಾರ ಅವರ ಜನಪದ ಕೌದಿಯ ಚಿತ್ತಾರ ಗ್ರಂಥ ಲೋಕಾರ್ಪಣೆ ಹಾಗೂ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದೆ.
ಗೊಟಗೋಡಿ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ ಕಾರ್ಯಕ್ರಮ ಉದ್ಘಾಟಿಸುವರು. ಜನಪದ ಕೌದಿಯ ಚಿತ್ತಾರ ಗ್ರಂಥವನ್ನು ಕವಿವಿ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಬಿಡುಗಡೆ ಮಾಡುವರು. ರಾಯಭಾಗದ ರಾಷ್ಟ್ರೀಯ ಚಿತ್ರಕಲಾವಿದ ಬಾಬುರಾವ್ ನಡೋಣಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಕೃತಿ ಕುರಿತು ಡಾ. ಬಾಳಣ್ಣ ಶೀಗಿಹಳ್ಳಿ ಮಾತನಾಡುವರು.
ಅತಿಥಿಗಳಾಗಿ ಬಿ. ಎಸ್. ದೇಸಾಯಿ ಹಾಗೂ ಬಿ. ಮಾರುತಿ ಆಗಮಿಸುವರು. ಪ್ರೊ. ಶಶಿಧರ ತೋಡಕರ ಅಧ್ಯಕ್ಷತೆ ವಹಿಸುವರು. ಚಿತ್ರಕಲಾವಿದರಾದ ಕುಮಾರ ಕಾಟೇನಹಳ್ಳಿ, ಡಾ. ಪರಶುರಾಮ ಕಟ್ಟಿಸಂಗಾವಿ ಅವರಿಗೆ ಸನ್ಮಾನಿಸಲಾಗುವುದು. ಸ್ವರ ಸಂವಾದಿನಿ ಸಂಗೀತ ವಿದ್ಯಾಲಯ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.