ಚಿತ್ರಕಲಾ ಪ್ರದರ್ಶನ 9ರಿಂದ

6 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿರಿಯ ಕಲಾವಿದರಾದ ಪಿ.ಆರ್​. ತಿಪ್ಪೇಸ್ವಾಮಿ, ಸೋಮಶೇಖರ ಸಾಲಿ ಹಾಗೂ ಬಿ.ಕೆ. ಹುಬಳಿ ಜನ್ಮ ಶತಮಾನೋತ್ಸವ ನಿಮಿತ್ತ ಕರ್ನಾಟಕ ಲಲಿತ ಕಲಾ ಅಕಾಡೆಮಿ ವತಿಯಿಂದ ಆ. 9ರಂದು ಇಲ್ಲಿನ ಸರ್ಕಾರಿ ಆರ್ಟ್​ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಸದಸ್ಯ ಸಂಚಾಲಕ ಕರಿಯಪ್ಪ ಹಂಚಿನಮನಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ಹಿರಿಯ ಕಲಾವಿದ ಎಂ.ಆರ್​. ಬಾಳಿಕಾಯಿ ಪ್ರದರ್ಶನ ಉದ್ಘಾಟಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಕಲಾವಿದರಾದ ಸುರೇಶ ಹಾಲಭಾವಿ, ಗಾಯತ್ರಿ ಗೌಡರ, ಈಶ್ವರ ಜೋಶಿ, ಶಂಕರ ಹಲಗತ್ತಿ ಆಗಮಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ವಿಜಯವಾಣಿ ಬೆಂಗಳೂರು ಆವೃತ್ತಿ ಮುಖ್ಯ ವರದಿಗಾರ ರುದ್ರಣ್ಣ ಹರ್ತಿಕೋಟೆ, ವಿದ್ಯಾಧರ ಸಾಲಿ, ಜಯಂತ ಹುಬಳಿ ಆಗಮಿಸಲಿದ್ದಾರೆ ಎಂದರು.
ಮಧ್ಯಾಹ್ನ 2 ಗಂಟೆಗೆ ಪಿ.ಆರ್​. ತಿಪ್ಪೇಸ್ವಾಮಿ ಜೀವನ ಮತ್ತು ಕಲೆ ಕುರಿತು ಡಾ. ಎಸ್​.ಸಿ. ಪಾಟೀಲ, ಸೋಮಶೇಖರ ಸಾಲಿ ಕಲಾವಿದ ಹಾಗೂ ಸಂಘಟಕರಾಗಿ ಕುರಿತು ಡಾ. ಡಿ.ಎ. ಉಪಾಧ್ಯಾಯ ಹಾಗೂ ಬಿ.ಕೆ. ಹುಬಳಿ ಕಲೆ ಮತ್ತು ನೈಪುಣ್ಯ ಕುರಿತು ಡಾ. ಬಸವರಾಜ ಕುರಿಯವರ್​ ಉಪನ್ಯಾಸ ನೀಡಲಿದ್ದಾರೆ. ಡಾ. ಮಾನಸ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಅಕಾಡೆಮಿ ಸಂಗ್ರಹಿಸಿರುವ ಹಿರಿಯ ಕಲಾವಿದರ ಕಲಾಕೃತಿಗಳನ್ನು ಆ. 12ರವರೆಗೆ ಪ್ರದರ್ಶನಕ್ಕೆ ಇಡಲಾಗುವುದು. ಹಿರಿಯ ಕಲಾವಿದರ ಕುರಿತು ಇಂದಿನ ಯುವಕರಿಗೆ ತಿಳಿಸುವ ನಿಟ್ಟಿನಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ವೀಕ್ಷಣೆಗೆ ಅವಕಾಶವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net