ರಾಜೀವ ಗಾಂಧಿ ಶಾಲೆಯಲ್ಲಿ ವಸ್ತು ಪ್ರದರ್ಶನ

27 Dwd 1
Published on

ಧಾರವಾಡ: ನಗರದ ರಾಜೀವ ಗಾಂಧಿ ಸಿಬಿಎಸಇ ಶಾಲೆಯಲ್ಲಿ ಬುಧವಾರ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಹಿಂದಿ ಪ್ರಚಾರ ಸಭಾ ಅಧ್ಯಕ್ಷ, ಮಾಜಿ ಮೇಯರ್ ಈರೇಶ ಅಂಚಟಗೇರಿ ಪ್ರದರ್ಶನ ಉದ್ಘಾಟಿಸಿದರು.
ಎಲ್‌ಕೆಜಿ, ಪ್ರಾಥಮಿಕ ಶಾಲೆಯ ಮಕ್ಕಳು ವಿವಿಧ ವಿಜ್ಞಾನ ವಸ್ತುಗಳನ್ನು ಸಿದ್ಧಪಡಿಸಿಕೊಂಡು ಬಂದು ಅವುಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಪ್ರದರ್ಶನ ವೀಕ್ಷಿಸಿದ ಪಾಲಕರು ಮಕ್ಕಳ ಪ್ರಯತ್ನಕ್ಕೆ ಸಂತಸ ವ್ಯಕ್ತಪಡಿಸಿದರು.
ಡಾ. ಎಸ್.ಬಿ. ಹಿಂಚಿಗೇರಿ, ರಾಧಾಕೃಷ್ಣನ್, ಸುರೇಖಾ ಚಾಂದಗುಡೆ, ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net