ಕಲೆ, ಸಂಸ್ಕೃತಿ ರಕ್ಷಣೆ ಎಲ್ಲರ ಜವಾಬ್ದಾರಿ

1
ಜುಗೂಳ ಗ್ರಾಪಂ ವತಿಯಿಂದ ಜೈ ಭೀಮ ಭಜನಾ ಮಂಡಳಿಗೆ ಸೋಮವಾರ ಅಣ್ಣಾಸಾಬ ಪಾಟೀಲ ಸಾಮಗ್ರಿ ವಿತರಿಸಿದರು. ಕಾಕಾಸಾಬ ಪಾಟೀಲ, ಮಹಾದೇವ ಕಾಂಬಳೆ, ಸುರೇಶ ಪಾಟೀಲ, ಆನಂದ ಕುಲಕರ್ಣಿ ಇತರರಿದ್ದರು.
Published on

ಕಾಗವಾಡ: ನಮ್ಮ ಗ್ರಾಮೀಣ ಕಲೆ-ಸಂಸ್ಕೃತಿಗಳು ಉಳಿವಿಗೆ ಶ್ರಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜುಗೂಳ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ ಹೇಳಿದರು.

ತಾಲೂಕಿನ ಜುಗೂಳ ಗ್ರಾಪಂ ವತಿಯಿಂದ ಸುಮಾರು 27 ಸಾವಿರ ರೂ. ಅನುದಾನದಲ್ಲಿ ಜೈ ಭೀಮ ಭಜನಾ ಮಂಡಳಿಗೆ ಸೋಮವಾರ ಸಾಮಗ್ರಿ ವಿತರಿಸಿ ಮಾತನಾಡಿದರು. ಗ್ರಾಮೀಣ ಕಲೆ, ಕ್ರೀಡೆಗಳನ್ನು ನಾವೆಲ್ಲರೂ ಪೋಷಿಸಿ ಯುವಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಕಾಕಾಸಾಬ ಪಾಟೀಲ, ಮುಖಂಡರಾದ ಮಹಾದೇವ ಕಾಂಬಳೆ, ಸುರೇಶ ಪಾಟೀಲ, ಆನಂದ ಕುಲಕರ್ಣಿ, ಅವಿನಾಶ ಪಾಟೀಲ, ನಿತಿನ ಪಾಟೀಲ, ಭರತ ಅಳತೆ, ರಾಜು ಪಾಟೀಲ, ದಾದಾ ಅಂಬಿ, ಚಿದಾನಂದ ತಾರದಾಳೆ ಸೇರಿ ಜೈ ಭೀಮ ಭಜನಾ ಮಂಡಳದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net