

ಮಡಿಕೇರಿ: ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ವತಿಯಿಂದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ನಗರದ ರಾಜಾಸೀಟ್‌ನಲ್ಲಿ ಶನಿವಾರ ಆಯೋಜಿಸಲ್ಪಟ್ಟಿದ್ದ ಕೊಡಗು ಮತ್ತು ಮತದಾನ ವಿಷಯ ಸಂಬಂಧಿತ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯಾದ್ಯಂತಲಿನ ವಿದ್ಯಾರ್ಥಿಗಳಲ್ಲದೇ ಹೊರಜಿಲ್ಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮತದಾನದ ಮಹತ್ವದ ಕುರಿತಂತೆ ವಿದ್ಯಾರ್ಥಿಗಳಲ್ಲಿನ ಆಸಕ್ತಿ, ತಿಳುವಳಿಕೆ ಬಗ್ಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮೆಚ್ಚುಗೆ ವ್ಯಕ್ತಪಡಿಸಿದರು.
೧೪ ವರ್ಷದೊಳಗಿನ ವಿಭಾಗದಲ್ಲಿ ಹರ್ಷಿತ ಪೊನ್ನಪ್ಪ ಸಂತಜೋಸೇಫರ ಶಾಲೆ ಮಡಿಕೇರಿ(ಪ್ರ), ಧ್ರುವನಂಜಪ್ಪ, ಜನರಲ್ ತಿಮ್ಮಯ್ಯ ಶಾಲೆ ಮಡಿಕೇರಿ(ದ್ವಿ), ಕೆ.ಯು.ಧೃತಿ ಸಂತಜೊಸೇಫರ ಶಾಲೆ ಮಡಿಕೇರಿ(ತೃ), ವಿಸ್ಮಯಿ.ಎಂ. ಮೊರಾರ್ಜಿ ದೇಸಾಯಿ ವಸತಿಶಾಲೆ, ಕೂಡಿಗೆ (ಸಮಧಾನಕರ) ಬಹುಮಾನ ಪಡೆದುಕೊಂಡರು.
೧೪ ರಿಂದ ೧೮ ವರ್ಷದೊಳಗಿನ ವಿಭಾಗದಲ್ಲಿ ಎ.ಕೆ.ಮೋಕ್ಷಾ ಕಾವೇರಿ ವಿದ್ಯಾಸಂಸ್ಥೆ ವಿರಾಜಪೇಟೆ(ಪ್ರ) ತಶ್ಮಿಕಾ.ಕೆ.ಎಂ. ಸರ್ಕಾರಿ ಪ್ರೌಢಶಾಲೆ ಮೂರ್ನಾಡು(ದ್ವಿ), ಮೋಕ್ಷಿತಾ.ಕೆ.ಜೆ. ನವೋದಯ ಶಾಲೆ ಗಾಳಿಬೀಡು(ತೃ), ಕುನಾಲ್ ದೇವಯ್ಯ ಸಿ.ಸಿ.ರಾಮಕೃಷ್ಣ ವಿದ್ಯಾಕೇಂದ್ರ ಮೈಸೂರು(ಸಮಧಾನಕರ) ಬಹುಮಾನ ಪಡೆದುಕೊಂಡರು.
೧೮ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸ್ವಾಮಿನಾಥ್.ಆರ್ ಮಡಿಕೇರಿ(ಪ್ರ), ಬಿ.ಟಿ.ದೇಚಮ್ಮ ಮೂರ್ನಾಡು ಕಾಲೇಜು(ದ್ವಿ), ಚೈತ್ರಾ ಬಿ.ಎಸ್. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು(ತೃ) ಮಾಧುರ್ಯ ಮಂಗಳೂರು(ಸಮಧಾನಕರ) ಬಹುಮಾನ ಪಡೆದುಕೊಂಡರು.