

ಮೈಸೂರು: ಹೆಸರಾಂತ ಕನ್ಸ್ಟ್ರಕ್ಷನ್ ಕಂಪನಿ ‘ನಕ್ಷಾ ಬಿಲ್ಡರ್ಸ್’ ಜೆಪಿ ನಗರದ ಮಹರ್ಷಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನ.10 ರಂದು ವಿದ್ಯಾರ್ಥಿ ಗಳಿಗೆ ಅಂತರಶಾಲಾ ಮಟ್ಟದ ‘ಸತ್ರಂಗ್ 3.0’ ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ಶಂಕರ್ ತಿಳಿಸಿದರು.
1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಈ ಸ್ಪರ್ಧೆಯು ಒಟ್ಟು ಮೂರು ವಿಭಾಗಗಳಲ್ಲಿ ನಡೆಯಲಿದೆ. ನಕ್ಷ ಸೂಪರ್ ಜೂನಿಯರ್ (1 ರಿಂದ 4ನೇ ತರಗತಿ) ವಿಭಾಗಕ್ಕೆ ‘ನನ್ನ ಕನಸಿನ ಮನೆ’ ವಿಷಯದಲ್ಲಿ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ನಕ್ಷ ಜೂನಿಯರ್ (5 ರಿಂದ 7ನೇ ತರಗತಿ) ವಿಭಾಗಕ್ಕೆ ‘ವರ್ಣ ರಂಜಿತ ನಗರಗಳು’, ನಕ್ಷ ಸೀನಿಯರ್ (8 ರಿಂದ 10ನೇ ತರಗತಿ) ವಿಭಾಗಕ್ಕೆ ‘ಭವಿಷ್ಯದ ನಿರ್ಮಾಣ’ ವಿಷಯ ನೀಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಸುಂದರವಾದ ಟ್ರೋಫಿ ನೀಡಲಾಗುವುದು. ಭಾಗವಹಿಸುವ ಎಲ್ಲ ವಿದ್ಯಾರ್ಥಿ ಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ವಿದ್ಯಾರ್ಥಿ ಜತೆಗೆ ಒಬ್ಬರು ಪಾಲಕರು ಭಾಗವಹಿಸಬೇಕು. ಪಾಲಕರು ತಮ್ಮ ಮಕ್ಕಳ ಚಿತ್ರಕಲೆಗೆ ಸಹಕಾರ ನೀಡಬಹುದು. ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಶಾಸಕ ಕೆ.ಹರೀಶ್ ಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಮಹರ್ಷಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನ.10 ರಂದು ಬೆಳಗ್ಗೆ 8.30 ರಿಂದ ನೋಂದಣಿ ಕಾರ್ಯ ನಡೆಯಲಿದೆ. ಮಾಹಿತಿಗೆ ಮೊ: 74115 26622 ಸಂಪರ್ಕಿಸಬಹುದು ಅಥವಾ ಇ-ಮೇಲ್ ್ಞ.ಠಿಜ್ಟಚ್ಞಜಃಜಞಜ್ಝಿ.್ಚಟಞ ಮೂಲಕ ಮಾಹಿತಿ ಪಡೆಯಬಹುದು. ಪ್ರಥಮ ಬಾರಿ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದ ಸಂದರ್ಭ 1,300 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಳೆದ ಬಾರಿ 1,500 ವಿದ್ಯಾರ್ಥಿಗಳು ಭಾವಹಿಸಿದ್ದರು. ಈ ಬಾರಿ 2,500 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಹೊಂದಿದ್ದೇವೆ ಎಂದು ಹೇಳಿದರು.
ಕಂಪನಿಯ ನಿರ್ದೇಶಕ ಆದಿತ್ಯ ಮಾತನಾಡಿ, ‘ನಕ್ಷಾ ಬಿಲ್ಡರ್ಸ್’ ಮೈಸೂರಿನ ಹೆಸರಾಂತ ಕನ್ಸ್ಟ್ರಕ್ಷನ್ ಕಂಪನಿಯಾಗಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಜನರ ಅಭಿರುಚಿಗೆ ತಕ್ಕಹಾಗೆ ಅತ್ಯಾಧುನಿಕ ಹಾಗೂ ಅತ್ಯುತ್ತಮ ಮಾದರಿಯ ಮನೆಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿ ಇದ್ದೇವೆ. ನಗರದಲ್ಲಿ ಏಕಕಾಲದಲ್ಲಿ 107 ಮನೆಗಳ ನಿರ್ಮಾಣ ಕಾರ್ಯ ನಮ್ಮ ಕಂಪನಿಯಿಂದ ನಡೆಯುತ್ತಿದ್ದು, ಇದು ಕಂಪನಿಯ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಂಪನಿಯ ನಿರ್ದೇಶಕಿ ಸೌರಭ ಇದ್ದರು.