ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಏಪ್ರಿಲ್ 3ರಿಂದ 22ರ ವರೆಗೆ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತದಲ್ಲಿರುವ ಜೆಎಸ್ ಎಸ್ ಬಾಲಜಗತ್ ಶಾಲಾ ಆವರಣದಲ್ಲಿ ಚಿತ್ರಕಲಾ ಶಿಬಿರ ಆಯೋಜಿಸಲಾಗಿದೆ. 1ರಿಂದ 4ನೇ ತರಗತಿ, 5ರಿಂದ 7ನೇ ತರಗತಿ ಹಾಗೂ 8ನೇ ತರಗತಿ ನಂತರದ ವಿದ್ಯಾರ್ಥಿಗಳ ವಿಭಾಗದಲ್ಲಿ ಶಿಬಿರ ನಡೆಯಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಶಿಬಿರ ನಡೆಯಲಿದ್ದು, ನಿಸರ್ಗದಲ್ಲಿ ಚಿತ್ರ ಬಿಡಿಸುವ ಸಲುವಾಗಿ ಒಂದು ದಿನ ಪ್ರವಾಸವನ್ನು ಆಯೋಜಿಸಲಾಗುವುದು. ಹಿಂದೆ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ನುರಿತ ಕಲಾವಿದರು ವಿಶೇಷ ತರಬೇತಿ ನೀಡಲಿದ್ದಾರೆ. ಶಿಬಿರದ ಕೊನೆಯಲ್ಲಿ ಪ್ರದರ್ಶನ ನಡೆಯಲಿದ್ದು, ಉತ್ತಮ ಚಿತ್ರಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಆಸಕ್ತರು ಜೆಎಸ್‌ಎಸ್ ಬಾಲಜಗತ್ ಶಾಲೆಯಲ್ಲಿ ಅರ್ಜಿ ಪಡೆದು ಏಪ್ರಿಲ್ 2ರ ಒಳಗೆ ಸಲ್ಲಿಸುವುದು. ಮಾಹಿತಿಗೆ ಶಾಲೆಯ ಶಿಕ್ಷಕಿ 9686677503 ಅಥವಾ ಚಿತ್ರ ಶಿಕ್ಷಕ ಸಬಲಣ್ಣನವರ್ 8095440122 ಅನ್ನು ಸಂಪರ್ಕಿಸುವಂತೆ ಶಿಬಿರದ ಸಂಚಾಲಕರಾದ ಎಂ.ಎಸ್.ಜಂಬುಕೇಶ್ವರ (9886623490) ಹೇಳಿಕೆಯಲ್ಲಿ ಕೋರಿದ್ದಾರೆ.