ವಿದ್ಯಾರ್ಥಿಗಳಿಗಾಗಿ ಮೈಸೂರಿನಲ್ಲಿ ಚಿತ್ರಕಲಾ ಶಿಬಿರ

Published on

ಮೈಸೂರು: ಪ್ರಾಥಮಿಕ, ಮಾಧ್ಯಮ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಏಪ್ರಿಲ್ 2 ರಿಂದ 22ರವರೆಗೆ ಚಿತ್ರಕಲಾ ಶಿಬಿರ ಆಯೋಜಿಸಲಾಗಿದೆ.

ಗನ್‌ಹೌಸ್ ಬಳಿ ಇರುವ ಬಾಲಜಗತ್ ಶಾಲಾ ಆವರಣದಲ್ಲಿ ಆಯೋಜಿಸಿರುವ ಶಿಬಿರದಲ್ಲಿ 6ರಿಂದ 9, 10ರಿಂದ 13 ಹಾಗೂ 14ರಿಂದ 17 ವರ್ಷದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಬಹುದು. ಪ್ರತಿ ವಿಭಾಗದಲ್ಲಿ 30 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ನುರಿತ ಕಲಾವಿದರಿಂದ ಪ್ರಾತ್ಯಕ್ಷಿಕೆ ಹಾಗೂ ನಿಸರ್ಗ ಚಿತ್ರ ರಚಿಸುವ ಒಂದು ದಿನದ ಪ್ರವಾಸವನ್ನೂ ಆಯೋಜಿಸಲಾಗುವುದು. ನಿತ್ಯ ಬೆಳಗ್ಗೆ 9ರಿಂದ 1 ಗಂಟೆಯವರಗೆ ಆಯೋಜಿಸಿರುವ ಶಿಬಿರದಲ್ಲಿ ಕಲಿತ ಮಕ್ಕಳು ರಚಿಸಿದ ಚಿತ್ರಗಳನ್ನು ಏಪ್ರಿಲ್ 24ರಂದು ಪ್ರರ್ದರ್ಶಿಸಿ ಪ್ರತಿ ವಿಭಾಗದಲ್ಲಿ ಮೂರು ಬಹುಮಾನ ನೀಡಲಾಗುವುದು.

ಅರ್ಜಿಗಳನ್ನು ಚಾಮರಾಜಪ್ಪ, ಸಹ ಶಿಕ್ಷಕರು, ಜೆಎಸ್‌ಎಸ್ ಬಾಲಜಗತ್ ಶಾಲೆ, ಜಗದ್ಗುರು ಡಾ.ಶ್ರೀಶಿವರಾತ್ರಿ ರಾಜೇಂದ್ರ ವೃತ್ತ, ರಾಮಾನುಜ ರಸ್ತೆ, ಮೈಸೂರು, ಇಲ್ಲಿಂದ ಪಡೆದು ಮಾ.31ರೊಳಗೆ ವಾಪಸ್ಸು ಕಚೇರಿಗೆ ತಲುಪಿಸುವುದು. ಮಾಹಿತಿಗೆ ಚಾಮರಾಜಪ್ಪ (9686677503) ಅಥವಾ ಪಿ.ಎಸ್.ಸಲಬಣ್ಣನವರ್ (8095440122) ಅವರನ್ನು ಸಂಪರ್ಕಿಸುವಂತೆ ಚಿತ್ರಕಲಾವಿದ ಎಸ್.ಎಂ.ಜಂಬುಕೇಶ್ವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net