ಬೊಳಂಬಳ್ಳಿ ದೇವಳಕ್ಕೆ ಬಾಹುಬಲಿ ಮೂರ್ತಿ ಆಗಮನ

bahubali
ತಾಲೂಕಿನ ಬೊಳಂಬಳ್ಳಿ ಕ್ಷೇತ್ರದ ಅಧಿದೇವತೆ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ಶುಕ್ರವಾರ 21 ಅಡಿ ಎತ್ತರದ ಶ್ರೀ ಭಗವಾನ್ ಬಾಹುಬಲಿ ಮೂರ್ತಿಯ ಆಗಮನವಾಯಿತು.
Published on

ಬೈಂದೂರು: 800ಕ್ಕೂ ಹೆಚ್ಚು ವರ್ಷ ಇತಿಹಾಸವಿರುವ ತಾಲೂಕಿನ ಬೊಳಂಬಳ್ಳಿ ಕ್ಷೇತ್ರದ ಅಧಿದೇವತೆ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ಶುಕ್ರವಾರ 21 ಅಡಿ ಎತ್ತರದ ಶ್ರೀ ಭಗವಾನ್ ಬಾಹುಬಲಿ ಮೂರ್ತಿ ತರಲಾಯಿತು. ದೊಡ್ಡಬಳ್ಳಾಪುರದಿಂದ ಬಂದಿರುವ ಏಕಶಿಲಾ ಬಾಹುಬಲಿ ವಿಗ್ರಹವನ್ನು ಕಾಲ್ತೋಡು ಗ್ರಾಪಂ ಅಧ್ಯಕ್ಷ ಬಟ್ನಾಡಿ ಅಣ್ಣಪ್ಪ ಶೆಟ್ಟಿ ಮಾರ್ಗದರ್ಶನದಲ್ಲಿ ಕಂಬದಕೋಣೆಯಿಂದ ಪೂರ್ಣಕುಂಭದ ಭವ್ಯ ಮೆರವಣಿಗೆ ಮೂಲಕ ದೇವಳಕ್ಕೆ ಸ್ವಾಗತಿಸಲಾಯಿತು.

21 ಅಡಿ ಎತ್ತರದ ಶ್ರೀರಾಮ ದೇವರ ವಿಗ್ರಹವೂ ಕ್ಷೇತ್ರಕ್ಕೆ ಬರಲಿದ್ದು, ಏ.3ರಿಂದ 7ರ ತನಕ ನಡೆಯುವ ಶ್ರೀರಾಮನವಮಿಯಂದು ಭಕ್ತರ ಸಹಕಾರದಿಂದ ಎರಡೂ ವಿಗ್ರಹ ಪ್ರತಿಷ್ಠಾಪಿಸಲಾಗುವುದು. ಬಾರ್ಕೂರು ಅರಮನೆ ದೇವರಾದ ಪದ್ಮಾವತಿ ಅಮ್ಮನವರು ಜೈನರ ಅಧೀನದ ಈ ಕ್ಷೇತ್ರದಲ್ಲಿ ನೆಲೆಸಿದ್ದು, ಪ್ರತಿದಿನ ನೂರಾರು ಸಂಖ್ಯೆಯ ಭಕ್ತರು ಇಲ್ಲಿ ಆಗಮಿಸುತ್ತಾರೆ. ಮಧ್ಯಾಹ್ನ ಅನ್ನಪ್ರಸಾದ ಸೇವೆ, ಮದುವೆ ಇತರೆ ಶುಭಕಾರ್ಯಕ್ಕೆ ಇಲ್ಲಿರುವ ಕಲ್ಯಾಣ ಮಂಟಪ ಹಾಗೂ ಯಾತ್ರಾರ್ಥಿಗಳಿಗೆ ವಸತಿಗೃಹ ಉಚಿತವಾಗಿದ್ದು, ಅನೇಕ ಸಮಾಜಮುಖಿ ಕಾರ್ಯ ದೇವಳ ವತಿಯಿಂದ ಮಾಡಲಾಗುತ್ತದೆ. ಕ್ಷೇತ್ರದ ವತಿಯಿಂದ ಬೆಳಕಿನ ಸೇವೆಯಾಗಿ ಯಕ್ಷಗಾನ ಬಯಲಾಟವೂ ನಡೆಯುತ್ತಿದೆ ಎಂದು ಕ್ಷೇತ್ರದ ಆಡಳಿತ ಧರ್ಮದರ್ಶಿ ಧರ್ಮರಾಜ್ ಜೈನ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net