ಇಬ್ಬರು ಮಹಿಳೆಯರ ಬಂಧನ

BKT 241
Published on

ಇಳಕಲ್ಲ: ನಗರದ ಬಂಗಾರ ಅಂಗಡಿಯಲ್ಲಿ ನಕಲಿ ಆಭರಣಗಳನ್ನು ಅಸಲಿ ಎಂದು ನಂಬಿಸಿ ಮೋಸ ಮಾಡಿ ಪರಾರಿಯಾಗಿದ್ದ ಇಬ್ಬರು ಮಹಿಳಾ ಆರೋಪಿಗಳನ್ನು ಪಟ್ಟಣದ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಕನಕಾನಗರ ಹಾಗೂ ವಿಮಾನಪುರದ ಆರೋಪಿಗಳಾದ ರೆಹನಾಬೇಗಂ ಸೈಯ್ಯದಪ್ಸರ್ (45) ಹಾಗೂ ಮೆಹರ‌್ಜಾನ್ ಸೈಯ್ಯದ್ ಆಶೀಫ್ (40) ಬಂಧಿತ ಮಹಿಳೆಯರು.

ಅವರಿಂದ 1,86,420 ರೂ. ನಗದು ಹಾಗೂ ಹೊಸಪೇಟೆ ನಗರದ ರೇಣುಕಾ ಜುವೆಲರಿ ಅಂಗಡಿಯಲ್ಲಿ ಮೋಸ ಮಾಡಿ ದೋಚಿದ್ದ 1,04,500 ರೂ. ಮೌಲ್ಯದ ಬಂಗಾರವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ನಗರದ ಚಿನ್ನದ ಅಂಗಡಿಯಲ್ಲಿ 2021ರ ಡಿ.10 ರಂದು ಮೋಸ ಮಾಡಿ ಬಂಗಾರ ದೋಚಿ ಪರಾರಿಯಾದ ಕುರಿತು ಸ್ಥಳೀಯ ಗಾಂಧಿ ವೃತ್ತದಲ್ಲಿರುವ ಚಿನ್ನದ ಅಂಗಡಿ ಮಾಲೀಕ ಹರೀಶ ವೆರ್ಣೇಕರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಹುನಗುಂದ ತಾಲೂಕು ಸಿಪಿಐ ಹೊಸಕೇರಪ್ಪ ಕೆ. ಮಾರ್ಗದರ್ಶನದಲ್ಲಿ ಇಳಕಲ್ಲ ಶಹರ ಪಿಎಸ್‌ಐ ಶಿವಾನಂದ ನಾಯಕವಾಡಿ ನೇತೃತ್ವದಲ್ಲಿ ಸಿಬ್ಬಂದಿ ಆನಂದ ಗೋಲಪ್ಪನವರ, ಗಣೇಶ ಪವಾರ, ರಜಾಕ ಗುಡದಾರಿ, ಮಹಾಂತೇಶ ದೊಡಮನಿ, ನಾಗೇಶ ರಾಠೋಡ, ಶೋಭಾ ಮೇಟ, ಆರ್.ಆರ್. ಡೋಣಿ, ಬಸವರಾಜ ಭಾವಿಕಟ್ಟಿ, ವಿ.ಡಿ. ಗೌಡರ ಒಳಗೊಂಡ ತಂಡ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದೆ. ಪೊಲೀಸರ ಕಾರ್ಯವನ್ನು ಶ್ಲಾಸಿ ಎಸ್‌ಪಿ ಲೋಕೇಶ ಜಗಲಾಸರ್ ವಿಶೇಷ ಬಹುಮಾನ ಘೋಷಿಸಿದ್ದಾರೆ.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net