ಶ್ರೀಕಾಂತ ಪೂಜಾರಿಯನ್ನು ಬಂಧಿಸಿದ್ದೇ ಅಪರಾಧ

Eshwarappa10c
Published on

ಬ್ಯಾಡಗಿ: ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹಮಂತ್ರಿ ಮಹಾನ್ ಸುಳ್ಳುಗಾರರು ಎಂಬುದು ಶ್ರೀಕಾಂತ ಪೂಜಾರಿ ಪ್ರಕರಣದಲ್ಲಿ ಗೊತ್ತಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ಮೊಟೇಬೆನ್ನೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಿದ್ದೇ ಅಪರಾಧ. ಎಫ್​ಐಆರ್ ಅನ್ನು ಕೂಡ ನ್ಯಾಯಾಲಯಕ್ಕೆ ಕೊಟ್ಟಿಲ್ಲ. ಏಕೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬಾರದಾ..? ಎಂದು ಅಹಂಕಾರದಿಂದ ಮಾತನಾಡುತ್ತಿದ್ದಾರೆ. ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ, 16 ಕೇಸ್ ಪೂಜಾರಿ ಮೇಲೆ ಇರಲಿಲ್ಲ, ಅವರ ಮೇಲೆ ಇದ್ದಿದ್ದು ರಾಮ ಮಂದಿರದ ಹೋರಾಟದ ಪ್ರಕರಣವೆಂದು. ಭಂಡ ಸಿಎಂ ಮತ್ತು ಗೃಹ ಮಂತ್ರಿ ರಾಜ್ಯದ ಕ್ಷಮೆ ಕೇಳಬೇಕು. ತಪ್ಪು ಮಾಹಿತಿ ನೀಡಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಶೆಟ್ಟರ್ ಸಿಎಂ ಆಗಿದ್ದಾಗ ಕೇಸ್ ವಾಪಸು ತೆಗೆದುಕೊಳ್ಳಲಿಲ್ಲ ಏಕೆ ಎಂದು ಪ್ರಶ್ನಿಸಿದರು. ದೇಶದ ಯಾವುದೇ ಸಿಎಂ ಅವರನ್ನು ಅಯೋಧ್ಯೆಗೆ ಕರೆದಿಲ್ಲ. ಈಗ ನಮಗೆ ಆಹ್ವಾನ ಬಂದಿಲ್ಲ ಅನ್ನುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಅವರ ಮಗನಿಗೆ ಪಾಕಿಸ್ತಾನದ ಬಗ್ಗೆ ಪ್ರೀತಿ ಜಾಸ್ತಿ. ಅವರು ಪಾಕಿಸ್ತಾನಕ್ಕೆ ಹೋಗಿ ಬಿಡಲಿ. ರಾಮ ಮಂದಿರ ಕಟ್ಟಿದ ಮೇಲೆ ಕಾಂಗ್ರೆಸ್​ನವರಿಗೆ ವಾಲ್ಮೀಕಿ ನೆನಪಾಗಿದೆ ಎಂದು ಕುಟುಕಿದರು. ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಕಾಂತೇಶ ಎ.ಇ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net