ಮಾದಕ ವಸ್ತು ಮಾರಾಟ ಪ್ರಕರಣದಡಿ ಬಂಧನ

arrested
Published on

ಬೆಳಗಾವಿ: ಮಾದಕ ವಸ್ತು ಹಾಗೂ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡು ಓಡಾಡುತ್ತಿದ್ದ ಪ್ರಕರಣದಡಿ ಪೊಲೀಸರು ಏಳು ಜನರನ್ನು ಬಂಧಿಸಿ, 1.58 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಮರ್ಥ ನಗರದ ಅನಿಕೇತ ಲೋಹಾರ (27), ಮಚ್ಛೆ ಜಯನಗರದ ಅಲ್ತಮಶ್​ ಅಯೂಬಖಾನ್​ ಪಠಾಣ. (25), ಟಿಪ್ಪುಸುಲ್ತಾನ ನಗರದ ಸದ್ದಾಂಹುಸೇನ ಸರ್ದಾರ್​ ಪಠಾಣ (24), ಶಿವಬಸವ ನಗರದ ಗ್ಯಾಂಗವಾಡಿಯ ರವಿ ಲೊಂಡೆ (50), ವಿಜಯನಗರದ ಹಿಂಡಲಗಾದ ಪ್ರಸಾದ ಪರಶಭೋಗ (23) , ರಾಮನಗರದ ಅಶೋಕ ಪಾಟೀಲ (45) ಹಾಗೂ ಸಂಭಾಜಿ ಗಲ್ಲಿಯ ಪ್ರಜ್ವಲ ಕಿತ್ತವಾಡಕರ (28) ಬಂಧಿತರು.

ಅಕ್ರಮ ಮಾದಕ ವಸ್ತು ಸಂಗ್ರಹ ಹಾಗೂ ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಮಾರ್ಕೆಟ್​, ಮಾಳಮಾರುತಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 48,400 ರೂ. ಮೌಲ್ಯದ 60.36 ಗ್ರಾಂ ಹೆರಾಯಿನ್​, 5,900 ರೂ. ಮೌಲ್ಯದ 255 ಗ್ರಾಂ ಗಾಂಜಾ, ಒಂದು ಆಟೋ ಸೇರಿ ಒಟ್ಟು 1,58,580 ರೂ. ಮೌಲ್ಯದ ವಸ್ತು ಹಾಗೂ ಮಾರಕಾಸ್ತ್ರ ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದ ಹಳೇ ಪಿಬಿ ರಸ್ತೆಯ ಓವರ್​ ಬ್ರಿಡ್ಜ್​ ಕೆಳಗಡೆ ಮಾರಕಾಸ್ತ್ರ ಇಟ್ಟುಕೊಂಡು ಓಡಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ನಗರ ಪೊಲೀಸ್​ ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net