ಚಿನ್ನಾಭರಣ ದೋಚಿದ್ದ ಆರೋಪಿ ಬಂಧನ

7jaggu20-Web
ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸಿಪಿ ನಾರಾಯಣ ಭರಮನಿ, ಇನ್‌ಸ್ಪೆಕ್ಟರ್ ದಿಲೀಪ್‌ಕುಮಾರ, ಪಿಎಸ್‌ಐ ಮಂಜುನಾಥ ಭಜಂತ್ರಿ ಮತ್ತು ಬಿ.ಕೆ.ಮಿಟಗಾರ, ದೀಪಕ ಸಾಗರ, ಶಂಕರ ಕುಗಟೊಳಿ ಇದ್ದಾರೆ.
Published on

ಬೆಳಗಾವಿ: ನಗರದ ಮನೆಯೊಂದರಲ್ಲಿ ಬಂಗಾರದ ಆಭರಣ ಮತ್ತು ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಎಪಿಎಂಸಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಸಿಕಂದರಪುರದ ಮೊಹ್ಮದ್ ಸಲ್ಮಾನ್ ನಜೀರ್‌ಅಹ್ಮದ್ ಅನ್ಸಾರಿ ಬಂಧಿತ ಆರೋಪಿ. 23.15 ಲಕ್ಷ ಮೌಲ್ಯದ 470 ಗ್ರಾಂ. ಚಿನ್ನಾಭರಣ ಮತ್ತು 60 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಹೊನಗಾ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸಂಗಮೇಶ್ವರ ನಗರದ ಗೌಸ್‌ಮೋದ್ದೀನ್ ಮೈನುದ್ದೀನ್ ತೋರಗಲ್ಲ ಎಂಬುವರು ತಮ್ಮ ಮನೆಯಲ್ಲಿ 470 ಗ್ರಾಂ. ಬಂಗಾರದ ಆಭರಣ ಮತ್ತು 1 ಲಕ್ಷ ರೂ.ಕಳವಾಗಿರುವ ಕುರಿತು ಶನಿವಾರ ದೂರು ನೀಡಿದ್ದರು. ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಡಿಸಿಪಿ ಮುತ್ತುರಾಜ ಮಾರ್ಗದರ್ಶನದಲ್ಲಿ ಎಸಿಪಿ ನಾರಾಯಣ ಭರಮನಿ, ಇನ್‌ಸ್ಪೆಕ್ಟರ್ ದಿಲೀಪ್‌ಕುಮಾರ, ಪಿಎಸ್‌ಐ ಮಂಜುನಾಥ ಭಜಂತ್ರಿ ಮತ್ತು ಸಿಬ್ಬಂದಿ ಬಿ.ಕೆ. ಮಿಟಗಾರ, ದೀಪಕ ಸಾಗರ, ಶಂಕರ ಕುಗಟೊಳಿ, ನಾಮದೇವ ಲಮಾಣಿ, ಕೆಂಪಣ್ಣ ದೊಡ್ಡಮನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net