28 ವರ್ಷದಿಂದ ತಲೆಮರೆಸಿಕೊಂಡಿದ್ದವ ಅರೆಸ್ಟ್

16mnd1 ARREST
Published on

ಮುಂಡಗೋಡ: ವಂಚನೆ ಪ್ರರಣದಲ್ಲಿ ಭಾಗಿಯಾಗಿ 28 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ಮಲ್ಲನಗೌಡ ಕರಬಸಗೌಡ ಪಾಟೀಲ (63)ಎಂಬಾತನೇ ಬಂಧಿತ. ತಾಲೂಕಿನಲ್ಲಿ 1995ರಲ್ಲಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದನೆಂದು ಈತನ ಮೇಲೆ ದೂರು ದಾಖಲಾಗಿತ್ತು. ಅಂದಿನಿಂದ ಇಲ್ಲಿವರೆಗೂ ಮಲ್ಲನಗೌಡ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆನ್ನ್ನಲಾಗಿದೆ.
ಸಿಪಿಐ ಬಿ.ಎಸ್. ಲೋಕಾಪುರ. ಪಿಸ್​ಐ ಯಲ್ಲಾಲಿಂಗ ಕುನ್ನೋರ, ಹನುಮಂತ ಕುಡಗುಂಟಿ, ಸಿಬ್ಬಂದಿ ಸಲೀಂ ಕೊಲ್ಲಾಪುರ, ಕೊಟೇಶ ನಾಗರವಳ್ಳಿ, ಬಸವರಾಜ ಲಮಾಣಿ ಅವರು ಆರೋಪಿ ಮಲ್ಲನಗೌಡನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net