ಸ್ಮಶಾನದಲ್ಲಿ ಇಂದಿರಾ ಕ್ಯಾಂಟಿನ್ ನಿರ್ವಿುಸಲು ಯತ್ನಿಸಿದವರನ್ನು ಬಂಧಿಸಿ

NEW IC
Published on

ಹುಬ್ಬಳ್ಳಿ : ಇಲ್ಲಿಯ ಮಂಟೂರ ರಸ್ತೆಯ ಶ್ರೀ ಸತ್ಯ ಹರಿಶ್ಚಂದ್ರ ರುದ್ರಭೂಮಿಯ ಗೋಡೆಯನ್ನು ಒಡೆದು ಸರ್ಕಾರದ ಆದೇಶ ಉಲ್ಲಂಘಿಸಿ, ಇಂದಿರಾ ಕ್ಯಾಂಟೀನ್ ನಿರ್ವಿುಸಿದ ದುಷ್ಕರ್ವಿುಗಳನ್ನು ತಕ್ಷಣ ಬಂಧಿಸಬೇಕು ಹಾಗೂ ಸೂಕ್ತ ಕಾನೂನು ಕ್ರಮಜರುಗಿಸಬೇಕು ಎಂದು ಶ್ರೀ ಸತ್ಯ ಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಹಾಗೂ ರಕ್ಷಣಾ ಸಮಿತಿ ಸದಸ್ಯ ವಿಜಯ ಗುಂಟ್ರಾಳ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶ ಉಲ್ಲಂಘಿಸಿ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಿುಸಿದ್ದರು. ಇದನ್ನು ಪ್ರಶ್ನಿಸಿದ ದಲಿತರ ಮೇಲೆ ಶೋಷಣೆ ಮಾಡಲಾಗಿದೆ. ಶಾಸಕ ಪ್ರಸಾದ ಅಬ್ಬಯ್ಯ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಇಂದಿರಾ ಕ್ಯಾಂಟೀನ್ ನಿರ್ವಣ, ಅನುಷ್ಠಾನ, ಕಾರ್ಯನಿರ್ವಹಣೆ ಹಾಗೂ ಮೇಲ್ವಿಚಾರಣೆ ಸಮಿತಿ ಅಧ್ಯಕ್ಷರಾಗಿರವ ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕರು, ಆಹಾರ ಸರಬರಾಜು ಆಯ್ಕೆ ನೋಡಲ್ ಅಧಿಕಾರಿ, ಪಾಲಿಕೆ ಅಧೀಕ್ಷಕ ಅಭಿಯಂತರ ಅವರಿಗೆ ಇಂದಿರಾ ಕ್ಯಾಂಟೀನ್ ನೋಡಲ್ ಅಕಾರಿಗಳ ಜವಾಬ್ದಾರಿ ಇದೆ. ಆದರೆ, ಇವರು ಸರ್ಕಾರದ ಆದೇಶ ಉಲ್ಲಂಘಿಸಿ ನಿರ್ವಿುಸಲು ಮುಂದಾಗಿದ್ದ ಇಂದಿರಾ ಕ್ಯಾಂಟೀನ್ ತಡೆಯಲು ವಿಫಲರಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ ಮೂಲಕ ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಲಾಗುವುದು ಎಂದು ಹೇಳಿದರು.

2022 ರಲ್ಲಿ ಸ್ಮಶಾನದ 2 ಜಾಗವನ್ನು ಭೂಮಿ ಒತ್ತುವರಿ ಮಾಡಿ ರಸ್ತೆ ನಿರ್ವಿುಸಲಾಗಿದೆ. ಮರಳಿ ಈ ಜಾಗ ಪಡೆಯಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಡಜನರಿಗೆ ಅನುಕೂಲವಾಗುವ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್​ಗಳು ಇರುವುದು ಸೂಕ್ತ ಎಂದರು.

ನಿಯಮ ಉಲ್ಲಂಘಿಸಿ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡುತ್ತಿದ್ದವರ ವಿರುದ್ಧ ಹೋರಾಟ ಮಾಡಲು ಮುಂದಾದವರನ್ನು ಶಾಸಕರು ಹತ್ತಿಕ್ಕಲು ಪ್ರಯತ್ನಿಸಿದರು ಎಂದು ದೂರಿದರು.

ಅನೂಪ ಬಿಜವಾಡ, ಬಸಂತಕುಮಾರ ಅನಂತಪುರ, ರಂಗನಾಯಕ ತಪೇಲಾ, ಶಿವಶಂಕರ ಭಂಡಾರಿ, ಶ್ರೀನಿವಾಸ ರಟ್ಟಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net