ಪಾಕ್‌ಪರ ಘೋಷಣೆ ಕೂಗಿದವರನ್ನು ಶೀಘ್ರ ಬಂಧಿಸಿ

SURESH
Published on

ತರೀಕೆರೆ: ಪಟ್ಟಣದ ಕೋಡಿಕ್ಯಾಂಪ್‌ನಲ್ಲಿ ಈದ್‌ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಬ್ಯಾನರ್, ಬಂಟಿಂಗ್ಸ್ ಅಳವಡಿಸುವಾಗ ಪಾಕ್‌ಪರ ಘೋಷಣೆ ಕೂಗಿ ದೇಶದ್ರೋಹದ ಕೃತ್ಯ ಎಸೆಗಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಆಗ್ರಹಿಸಿದರು.

ಪಟ್ಟಣದಲ್ಲಿ ಕಿಡಿಗೇಡಿಗಳು ಕೂಗಿರುವ ಪಾಕ್ ಪರವಾದ ಘೋಷಣೆಯಿಂದ ಆತಂಕ ಸೃಷ್ಠಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ತಾಲಿಬಾನ್ ರೀತಿಯ ಆಡಳಿತ ನಡೆಸುತ್ತಿದೆ. ಇದರಿಂದ ಕೆಲವು ಕಿಡಿಗೇಡಿಗಳು ದೇಶದ್ರೋಹದ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇಲ್ಲಿನವರ ವಿರುದ್ಧವೇ ಷಡ್ಯಂತ್ರ ರೂಪಿಸಿ ಪ್ರಕರಣದಿಂದ ಬಚಾವಾಗುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪೊಲೀಸರು ತಕ್ಷಣ ಪಾಕ್ ಪರ ಘೋಷಣೆ ಕೂಗಿ ಇಲ್ಲಿನ ಜನರ ಶಾಂತಿ ಕದಡುವ ಹುನ್ನಾರ ನಡೆಸಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಆವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಬಿಜೆಪಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮ್ಯಾಮ್‌ಕೋಸ್ ನಿರ್ದೇಶಕ ಟಿ.ಎಲ್.ರಮೇಶ್, ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್, ಅಜ್ಜಂಪುರ ಪಪಂ ಸದಸ್ಯರಾದ ಬಿ.ರಂಗಸ್ವಾಮಿ, ಮಧುಸೂದನ್, ಬಿಜೆಪಿ ಮಂಡಲ ಅಧ್ಯಕ್ಷ ಗರಗದಹಳ್ಳಿ ಪ್ರತಾಪ್, ತಾಪಂ ಮಾಜಿ ಸದಸ್ಯ ಟಿ.ವಿಜಯನಾಯ್ಕ, ಬಿ.ಎಸ್.ವಸಂತ್‌ಕುಮಾರ್, ಎಚ್.ಬಿ.ರೇಣುಕಪ್ಪ, ಟಿ.ಶಿವಮೂರ್ತಿ, ವಿಜಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net