

ಹುಬ್ಬಳ್ಳಿ: ಹಳಿಯಾಳ ವಕೀಲರ ಸಂಘದ ಅಧ್ಯಕರ ಮೇಲೆ ನಡೆಸಿರುವ ಹಲ್ಲೆ ಖಂಡಿಸಿ ಹುಬ್ಬಳ್ಳಿ ವಕೀಲರ ಸಂಘದ ಪದಾಧಿಕಾರಿಗಳು, ಕಲಾಪಗಳಿಂದ ದೂರು ಉಳಿದು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಸಿ.ಆರ್. ಪಾಟೀಲ ಮಾತನಾಡಿ, ವಕೀಲರ ಮೇಲೆ ಹಲ್ಲೆ, ಕೊಲೆ ಪ್ರಕರಣಗಳು ನಡೆಯುತ್ತಿವೆ. ವಕೀಲರಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಕೀಲರ ಸಂರಕ್ಷಣೆಗೆ ಕಾನೂನು ಜಾರಿಗೆ ತರಬೇಕು. ಕಾಯ್ದೆ ಜಾರಿಯಾಗಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ಹಳಿಯಾಳ ವಕೀಲರ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದವರನ್ನು ತಕ್ಷಣವೇ ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ, ಉಪಾಧ್ಯಕ್ಷ ಐ.ಕೆ. ಬೆಳಗಲಿ, ಸಹ ಕಾರ್ಯದರ್ಶಿ ಜಿ.ಎಫ್. ಹಿರೇಗೌಡರ, ಕೋಶಾಧ್ಯಕ್ಷ ಎಸ್.ಜಿ. ಅರಗಂಜಿ, ಎಸ್.ವೈ. ದುಂಡರಡ್ಡಿ, ಲೋಕೇಶ ಕೆ.ಎಂ. ಇತರರು ಇದ್ದರು.