ಹೊಸಪೇಟೆಯಲ್ಲಿ ಟ್ರಾನ್ಸ್‌ಫರ್ಮರ್ ಆಯಿಲ್, ಗ್ರೀಸ್, ಕಳ್ಳರ ಬಂಧನ,
Arrest, of thieves, of transformer oil, Greece,

IMG-20220825-WA0042.jpg
Published on

ಹೊಸಪೇಟೆ: ಕೆಲ ತಿಂಗಳಿಂದ ಉದ್ಯಮಿಗಳಿಗೆ ತಲೆ ನೋವಾಗಿದ್ದ ಟ್ರಾನ್ಸ್‌ಫರ್ಮರ್ ಆಯಿಲ್ ಮತ್ತು ಗ್ರೀಸ್ ಕಳ್ಳರನ್ನು ಬಂಧಿಸುವ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಜಯನಗರ ನಿವಾಸಿಗಳಾದ ಮಂಜುನಾಥ ಕೆ.(೩೦), ಮುಸ್ತಾಕ್ ಖೈಯಿಯಾ(೨೫), ದೇವನಹಳ್ಳಿಯ ಸಿ.ಗಜೇಂದ್ರ(೨೯) ಎಂಬುವವರನ್ನು ಬಂಧಿಸಲಾಗಿದೆ. ಅವರಿಂದ ೨೪.೩೯ ಲಕ್ಷ ರೂ. ಮೌಲ್ಯದ ಟ್ರಾನ್ಸ್ಫಾರ್ಮರ್ ಆಯಿಲ್, ಗ್ರೀಸ್ ಹಾಗೂ ೭ ಲಕ್ಷ ರೂ. ಮೌಲ್ಯದ ಬುಲೆರೋ ಪಿಕ್‌ಅಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೆಟ್ರೋಲಿಂಗ್‌ನಲ್ಲಿದ್ದ ಗ್ರಾಮೀಣ ಠಾಣೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ನಡೆದ ವಿಚಾರಣೆಯಲ್ಲಿ ಕಳೆದ ಏಪ್ರಿಲ್‌ನಿಂದ ಆಯಿಲ್, ಗ್ರೀಸ್ ಕಳ್ಳತನದಲ್ಲಿ ತೊಡಗಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಎನ್ನಲಾಗಿದೆ.
ಹೊಸಪೇಟೆ ಡಿಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಪಿಐ ಶ್ರೀನಿವಾಸ್ ಸಿ. ಮೇಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಂಜುನಾಥ ಮೇಟಿ, ಕೊಟ್ರೇಶ.ಜಿ, ಅಡಿವೆಪ್ಪ ಕಬ್ಬಳ್ಳಿ, ಸಣ್ಣಗಾಳೆಪ್ಪ, ಕೊಟ್ರೇಶ.ಎ, ಚಂದ್ರಪ್ಪ.ಬಿ, ನಾಗರಾಜ.ಬಿ, ಸಂತೋಷ್ ಕುಮಾರ್, ಅಬ್ದುಲ್ ನಜೀರ್ ಪಾಲ್ಗೊಂಡಿದ್ದರು ಎಂದು ಎಸ್ಪಿ ಡಾ.ಅರಣ್ ಕೆ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net