ಸ್ಮಾರಕ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಬಂಧಿಸಲಿ

10_08_2025_BGR_RURAL_PAGE_5
ಆನೇಕಲ್​ ತಾಲೂಕಿನ ಅತ್ತಿಬೆಲೆಯಲ್ಲಿ ಕನ್ನಡ ಜಾಗೃತಿ ವೇದಿಕೆಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಟನೆ ಅಧ್ಯ ಮಂಜುನಾಥ ದೇವ ಮಾತನಾಡಿದರು. ರಾಜ್ಯ ಮುಖಂಡ ಆರ್​.ಎನ್​.ಎಸ್​ ರವಿ, ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯ ಶ್ರೀನಿವಾಸ್​, ಯುವ ಟಕ ಜಿಲ್ಲಾಧ್ಯ ಆರ್​.ಮಧುಕುಮಾರ್​, ಕ.ಜಾ.ವೇ ಯುವ ಟಕ ಉಪಾಧ್ಯ ಜಾವೇದ್​ ಇದ್ದರು.
Published on

ಆನೇಕಲ್​ : ಯಾವುದೇ ತಕರಾರು ಇಲ್ಲದೆ ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಬೇಕು ಎಂದು ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್​ ದೇವ ಒತ್ತಾಯಿಸಿದರು. ವಿಷ್ಣು ಸ್ಮಾರಕ ಧ್ವಂಸ ಕುರಿತು ತಾಲೂಕಿನ ಅತ್ತಿಬೆಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಮಾರಕ ಧ್ವಂಸ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಬೇಕು. ಡಾ.ರಾಜಕುಮಾರ್​, ಪುನೀತ್​ ರಾಜಕುಮಾರ್​ ಹಾಗೂ ಅಂಬರೀಷ್​ ಅವರಂತೆ ವಿಷ್ಣುವರ್ಧನ್​ ಅವರಿಗೂ ನ್ಯಾಯ ಸಿಗಬೇಕು ಎಂದರು.

ಸರ್ಕಾರ, ಕಿಡಿಗೇಡಿಗಳು ಧ್ವಂಸ ಮಾಡಿರುವ ಜಾಗ ಮುಟ್ಟುಗೋಲು ಹಾಕಿಕೊಳ್ಳಲಿ. ಅದಕ್ಕೆ ತಕರಾರು ಇಲ್ಲ. ಸ್ಮಾರಕ ತೆರವು ಮಾಡಿರುವುದು ನಾಡಿಗೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೋರ್ಟ್​ ಆದೇಶ ಪಾಲಿಸಬೇಕಾದದ್ದು, ಅಧಿಕಾರಿಗಳ ಜವಾಬ್ದಾರಿ. ಆದರೆ, ಅದಕ್ಕೆ ಕಾರಣ ಆದವರ ಮೇಲೆ ಕ್ರಮ ಆಗಬೇಕು. ಸ್ಮಾರಕ ಧ್ವಂಸ ಮಾಡಿದ ಮೇಲೆ ಅಲ್ಲಿ ವಿಷ್ಣುಸೇನಾ ಸಮಿತಿ ಅಧ್ಯ ಶ್ರೀನಿವಾಸ್​ ಸೇರಿ ಹಲವರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ ಪ್ರತಿಭಟನಾಕಾರರನ್ನು ಬಂಧಿಸಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಹೇಳಿದರು.

ನಟ ಸುದೀಪ್​ ಹಾಗೂ ಶಿವರಾಜ್​ ಕುಮಾರ್​ ಅವರು ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದ್ದು, ಮುಂದಿನ ಹೋರಾಟ ಕುರಿತು ಸದ್ಯದಲ್ಲೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಂಜುನಾಥ್​ ದೇವ ತಿಳಿಸಿದರು.

ಅಖಿಲ ಕರ್ನಾಟಕ ಆನ್​ ಪ್ರಿನ್ಸ್​ ಧ್ರುವ ಸರ್ಜಾ ಅಭಿಮಾನಿಗಳ ಸಂದ ಅಧ್ಯಕ್ಷ ಮಹಾನ್​ ಮಾತನಾಡಿ, ಕಲಾವಿದರು ಒಂದಾಗಿ ಹೋರಾಟ ಮಾಡಬೇಕು. ವಿಷ್ಣುವರ್ದನ್​ ಅವರು ರಾಜ್ಯದಲ್ಲಿ ಜನಿಸಿದ್ದೇ ತಪ್ಪಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು. ಮುಖಂಡರಾದ ಸೆಂಟ್ರಿಂಗ್​ ಮಂಜುನಾಥ್​, ನಟರಾಜ್​, ಶರಣು, ಎಚ್​.ಎಲ್​.ಟಿ.ಮಂಜುನಾಥ್​, ಹಳೇಹಳ್ಳಿ ಹರೀಶ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net