ಮೂರ್ತಿ ಭಗ್ನಗೊಳಿಸಿದವರನ್ನು ಬಂಧಿಸಿ

Joshi New
Published on

ಹುಬ್ಬಳ್ಳಿ : ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿ ದತ್ತಾತ್ರೇಯ ವಿಗ್ರಹ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಶೀಘ್ರ ಬಂಧಿಸುವಂತೆ ಮಹಾನಗರ ಪೊಲೀಸ್ ಆಯುಕ್ತರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದ್ದಾರೆ.

ದೇಶಪಾಂಡೆ ನಗರದ ದತ್ತಾತ್ರೇಯ ದೇವಸ್ಥಾನದಲ್ಲಿನ ಈ ಘಟನೆ ಅಕ್ಷಮ್ಯ ಅಪರಾಧ ಎಂದು ಖಂಡಿಸಿರುವ ಸಚಿವ ಜೋಶಿ, ಇತಿ್ತೕಚೆಗೆ ಹಲವೆಡೆ ಹಿಂದುಗಳ ನಂಬಿಕೆಗೆ ಧಕ್ಕೆ ತರುವಂಥ ದುಷ್ಕೃತ್ಯಗಳು ಘಟಿಸುತ್ತಲೇ ಇದ್ದು, ಸರ್ಕಾರದ ಬಿಗಿ ಆಡಳಿತ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ ಎಂದು ಆಕೊ್ರೕಶ ಹೊರ ಹಾಕಿದ್ದಾರೆ.

ದತ್ತಾತ್ರೇಯ ಮೂರ್ತಿಯ ಕೈಗಳನ್ನು ಕತ್ತರಿಸಿ ದುಷೃ್ಕ್ಯ ಎಸಗಿರುವ ಸಮಾಜಘಾತಕರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮಕ್ಕೆ ಗುರಿಪಡಿಸಬೇಕೆಂದು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.

ನಾಡಿನೆಲ್ಲೆಡೆ ದಸರಾ ಮಹೋತ್ಸವ ಆಚರಿಸುತ್ತಿದ್ದು, ಜನತೆ ವಿಶೇಷ ಪೂಜೆ-ಪುನಸ್ಕಾರ, ವಿವಿಧ ಧಾರ್ವಿುಕ ಮತ್ತು ಸಾಂಸೃ್ಕಕ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ. ಆದರೆ, ಕಿಡಿಗೇಡಿಗಳು ದುಷ್ಕೃತ್ಯ ನಡೆಸಿ, ಹಬ್ಬಗಳಲ್ಲಿ ಧಾರ್ವಿುಕ ಆಚರಣೆಗೆ ಭಂಗ ತಂದು ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಪ್ರಕಟಣೆ ಮೂಲಕ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net