ಪೆಟ್ರೋಲ್ ಸುರಿದು ಅಂಗಡಿಗೆ ಬೆಂಕಿ ಹಚ್ಚಿದವನ ಬಂಧನ

21harohalli1
Published on

ಹಾರೋಹಳ್ಳಿ: ಲಾಭದ ಉದ್ದೇಶವಾಗಿ ಪ್ರತಿಸ್ಪರ್ಧಿ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣ ಭೇದಿಸಿರುವ ಹಾರೋಹಳ್ಳಿ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.ಮಹದೇವ ಆಟೋಮೊಬೈಲ್ ಅಂಗಡಿ ಮಾಲೀಕ ಮುಖೇಶ್ ಕುಮಾರ್ (25) ಬಂಧಿತ ಆರೋಪಿ. ಈತನ ಅಂಗಡಿ ಸಮೀಪ ರಘುವೀರ್ ಸಿಂಗ್ ಎಂಬುವರು ವರ್ಷದ ಹಿಂದೆ ಕೃಷ್ಣ ಆಟೋ ಮೊಬೈಲ್ ಅಂಗಡಿ ಪ್ರಾರಂಭಿಸಿದ್ದು ಇದರಿಂದ ಈತನಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಗಿತ್ತು. ಇದರಿಂದ ಕೋಪಗೊಂಡು ತನ್ನ ಅಂಗಡಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಜಾಕೀರ್ ಎಂಬಾತನೊಂದಿಗೆ ಸಂಚು ರೂಪಿಸಿ ಜಾಕೀರ್ ಸ್ನೇಹಿತ ಬಲವೀರ್ ಸಿಂಗ್ ಹಾಗೂ ಅವನ ಸಹಚರರನ್ನು ರಾಜಸ್ಥಾನದಿಂದ ಕರೆಸಿ ಡಿ.20ರಂದು ಮಧ್ಯರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.

ಇನ್ನೊಂದು ಪ್ರಕರಣ ಪತ್ತೆ : ಒಂದು ವರ್ಷದ ಹಿಂದೆ ಹಾರೋಹಳ್ಳಿಯ ಕುಂಬಾರ್ ಶೆಡ್​ನಲ್ಲಿದ್ದ ಮಹಾಲಕ್ಷ್ಮೀ ಆಟೋಮೊಬೈಲ್ ಅಂಗಡಿಗೂ ಕೂಡ ಇದೇ ರೀತಿ ಸಂಚು ರೂಪಿಸಿ ಬೆಂಕಿ ಹಚ್ಚಿದ್ದು ನಾವೇ ಎಂದು ಆರೋಪಿ ಮುಖೇಶ್ ಕುಮಾರ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net