

ಹುಬ್ಬಳ್ಳಿ: ನಗರದ ರೈಲ್ವೆ ಸ್ಟೇಷನ್ ಹತ್ತಿರವಿರುವ ಕುಲಕರ್ಣಿ ಹಕ್ಕಲ ನಿವಾಸಿ ಬಾಲಾಜಿ ಎಂಬಾತನಿಂದ ಶಹರ ಠಾಣೆ ಪೊಲೀಸರು, ಮಾರಾಕಾಸ್ತ್ರಗಳನ್ನು ವಶಪಡಿಸಿಕೊಂಡು ಬಂಧಿಸಿದ್ದಾರೆ.
ಮಾಹಿತಿ ಆಧರಿಸಿ ಪೊಲೀಸರು ಮನೆಯ ಮೇಲೆ ದಾಳಿ ಮಾಡಿದಾಗ ಮಾರಕಾಸ್ತ್ರಗಳು ಪತ್ತೆಯಾಗಿವೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಹೊರವಲಯದ ಕಾರವಾರ ರಸ್ತೆಯ ಕೆಳಸೇತುವೆ ಬಳಿಯಿದ್ದ ನಗರದ ಪುರುಷ ಮತ್ತು ಮಹಿಳೆಗೆ ಬೆದರಿಸಿದ ಅಪರಿಚಿತರ ತಂಡ, 46 ಸಾವಿರ ರೂ. ಮೌಲ್ಯದ ಚಿನ್ನಾಭರಣ, ಮೊಬೈ ಫೋನ್ ದೋಚಿದೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.