ವನ್ಯಜಿವಿಗಳ ಅಂಗಾಂಗ ಮಾರುತ್ತಿದ್ದವನ ಬಂಧನ

FotoJet (1)
Published on

ಕೋಲಾರ : ಕೋಲಾರ ತಾಲೂಕಿನ ಬಂಗಾರಪೇಟೆ ರಸ್ತೆಯ ದಿಂಬ ಚಾಮನಹಳ್ಳಿ ಗೇಟ್​ ಬಳಿ ವನ್ಯಜಿವಿಗಳ ಅಂಗಾಂಗಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಣೆ ಮಾಡುತ್ತಿದ್ದವನನ್ನು ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ವಿವಿಧ ಪ್ರಾಣಿಗಳ ಅಂಗಾಂಗ ವಶಪಡಿಸಿಕೊಂಡಿಸಿದ್ದಾರೆ.
ಬಂಗಾರಪೇಟೆ ನಿವಾಸಿ ಕಿಶೋರ್​ ಕುಮಾರ್​(45) ಬಂಧಿತ. ಮಾರಾಟ ಮಾಡಲು ವನ್ಯಜಿವಿ ಅಂಗಾಂಗಗಳನ್ನು ಇಟ್ಟುಕೊಂಡಿರುವ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿದ್ದರು. ಈ ವೇಳೆ ಜಿಂಕೆಯ 2 ಕೊಂಬುಗಳು ಮತ್ತು ಚುಕ್ಕೆ ಜಿಂಕೆಯ ಚರ್ಮ ಪತ್ತೆಯಾಗಿವೆ. ಕಿಶೋರ್​ ಕುಮಾರ್​ನನ್ನು ವಿಚಾರಣೆಗೆ ಒಳಪಡಿಸಿದಾಗ, ಬಂಗಾರಪೇಟೆಯ ಮನೆಯಲ್ಲಿಯೂ ಹಲವು ವನ್ಯಜಿವಿಗಳ ಅಂಗಾಂಗಗಳನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಬಳಿಕ ಆರೋಪಿಯನ್ನು ಮನೆಗೆ ಕರೆದೊಯ್ದಾಗ ಚುಕ್ಕೆ ಜಿಂಕೆಯ 3 ಚರ್ಮಗಳು, 4 ಕಡಲು ಶಂಕುಗಳು, ಹುಲಿಯ ಚರ್ಮದಂತೆ ಬಣ್ಣ ಬಳಿದಿರುವ ಕಾಡುಬೆಕ್ಕಿನ 1 ಚರ್ಮ, 2 ನರಿ ಚರ್ಮಗಳು, 2 ಚಿರತೆ ಹಲ್ಲುಗಳು, 4 ಕಾಡು ಹಂದಿಯ ಹಲ್ಲುಗಳು ಸಿಕ್ಕಿವೆ. ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆ ಪಿಐ ಕಾಂತರಾಜು ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ಎಸ್​ಪಿ ಬಿ.ನಿಖಿಲ್​ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net