ಉತ್ತರಪ್ರದೇಶ ನಿವಾಸಿಗಳ ಬಂಧನ

arrest (1)
Published on

ಕಾಸರಗೋಡು: ಬೇಕಲದ ಕಾಪ್ಪಿಲ್‌ನ ಹೋಮ್‌ಸ್ಟೇ ಒಂದರಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಕಂಡುಬಂದ ಇಬ್ಬರನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಅತುಲ್ ಸಿಂಗ್(32), ಶಹಜಹಾನ್(33) ಬೇಕಲ್ ಪೊಲೀಸರ ವಶದಲ್ಲಿದ್ದಾರೆ. ಮಂಗಳವಾರ ರಾತ್ರಿ ಹೋಂಸ್ಟೇ ಸನಿಹ ಇಬ್ಬರೂ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳೀಯರು ಅವರನ್ನು ತಡೆದು ವಿಚಾರಣೆಗೊಳಪಡಿಸಿದಾಗ ಅವರು ಪರಸ್ಪರ ವಿರುದ್ಧ ಹೇಳಿಕೆ ನೀಡಿದ್ದರು. ಇದರಿಂದ ಸಂಶಯಗೊಂಡು ಬೇಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net