

ಮೈಸೂರು: ಇಬ್ಬರು ಸರಗಳ್ಳರನ್ನು ಹೆಬ್ಬಾಳ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಡಿ.17ರಂದು ಹೆಬ್ಬಾಳ್ ರಿಂಗ್ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರು ಮಹಿಳೆಯರನ್ನು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಸರಗಳ್ಳರು, ಹಿಂಬದಿ ಕುಳಿತಿದ್ದ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಉದಯಗಿರಿಯಲ್ಲಿ ಬಂಧಿಸಿದ್ದು, 1.2 ಲಕ್ಷ ರೂ. ಮೌಲ್ಯದ 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಮತ್ತು ಬೈಕ್ ಜಪ್ತಿ ಮಾಡಿದ್ದಾರೆ.
ಇನ್ಸ್‌ಪೆಕ್ಟರ್ ಎ.ಮಲ್ಲೇಶ್, ಎಸ್‌ಐಗಳಾದ ಕೀರ್ತಿ, ಪ್ರವೀಣ್‌ಕುಮಾರ್ ಹಾಗೂ ಸಿಸಿಬಿ ಘಟಕದ ಎಸ್‌ಐ ಕಿರಣ್ ಅರ್ಜುನ್ ಹಂಪಿಹೊಳಿ, ಸಿಬ್ಬಂದಿ ರವಿಕುಮಾರ್, ಮಲ್ಲಿಕಾರ್ಜುನಪ್ಪ, ಹರೀಶ್, ಮಹೇಶ್ ಹೊಸಮನಿ, ಆನಂದ, ಚಂದ್ರಶೇಖರ್, ಸುಬಾನಲ್ಲ ಬಾಲದಾರ, ಸುನೀಲ್, ಲಿಖಿತ್, ನರಸಿಂಹರಾಜು, ಮಹೇಶ್, ಗೋಂದರಾಜು, ಕುಮಾರ್ ಪಾಲ್ಗೊಂಡಿದ್ದರು.