

ಭಟ್ಕಳ: ಮುರ್ಡೆಶ್ವರ ಬಸ್ತಿ ಬಾಕಡಕೇರಿ ರೈಲ್ವೆ ಟ್ರಾಕ್ ಹತ್ತಿರ ಕೋಳಿ ಅಂಕದ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಒಟ್ಟು 7 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸ್ಥಳದಲ್ಲಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿರಾಲಿ ಕೋಟೆಬೈಲು ನಿವಾಸಿ ರವಿ ಶನಿಯಾರ ನಾಯ್ಕ(38) ಮತ್ತು ಹಾಡುವಳ್ಳಿಯ ಸೋಮಯ್ಯ ನಾಗಪ್ಪ ಗೊಂಡ ಬಂಧಿತರು. ಕೋಳಿ ಹುಂಜಗಳ ಮೇಲೆ ಹಣವನ್ನು ಪಂತವಾಗಿ ಕಟ್ಟಿ ಜೂಜಾಡಲು ಬಂದಿದ್ದರು. ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಶಿವಕುಮಾರ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 1080 ರೂ. ನಗದು, 2 ಹುಂಜಗಳು ಪೊಲೀಸರಿಗೆ ಸಿಕ್ಕಿವೆ. ಎರಡು ಕಾರು, ಒಂದು ಆಟೋ ರಿಕ್ಷಾ, ಒಂದು ಬೈಕ್ ಹಾಗೂ ಇನ್ನೊಂದು ನಂಬರ್ ರಹಿತ ಮೋಟಾರ್ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಐದೂ ವಾಹನಗಳ ಮಾಲೀಕರು ಪರಾರಿಯಾಗಿದ್ದು, ಪ್ರಕರಣ ದಾಖಲಾಗಿದೆ.