ಗಾಂಜಾ ತಂದಿದ್ದ ಇಬ್ಬರ ಬಂಧನ

ganja
Published on

ಧಾರವಾಡ: ನಗರದ ಹೊಸ ಎಪಿಎಂಸಿ ಬಳಿ ಮಾದಕವಸ್ತು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮಾಳಾಪುರದ ಅಮ್ಜದ್ ಶಿರಹಟ್ಟಿ (27) ಹಾಗೂ ಮಣಕಿಲ್ಲಾದ ಝಾಕೀರಹುಸೇನ್ ತಡಕಲ್ ಬಂಧಿತರು. ಆರೋಪಿಗಳಿಂದ 1 ಕೆಜಿ 269 ಗ್ರಾಂ ಗಾಂಜಾ, ದ್ವಿಚಕ್ರ ವಾಹನ, ಮೊಬೈಲ್ ಸೇರಿ 1.14 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಿಸಿಬಿ ಪೊಲೀಸ್ ಇನ್​ಸ್ಪೆಕ್ಟರ್ ಅಲಿ ಶೇಖ್ ನೇತೃತ್ವದಲ್ಲಿ ಸಿಬ್ಬಂದಿ ಎನ್.ಒ. ಜಾಧವ, ಎಸ್.ಸಿ. ಜಾಲವಾಡಗಿ, ಆರ್.ಎಸ್. ಗುಂಜಳ, ಡಿ.ಎನ್. ಗುಂಡಗೈ, ಎಸ್.ಎಚ್. ಕೆಂಪೋಡಿ, ಎನ್.ಡಿ. ಬೀರಣ್ಣವರ, ಸಂತೋಷ ಇಚ್ಚಂಗಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net