ನಕ್ಷತ್ರ ಆಮೆ ಸಾಗಿಸುತ್ತಿದ್ದ ಇಬ್ಬರ ಬಂಧನ

Oplus_131072
ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ಎಳೆಪಿಳ್ಳಾರಿ ದೇಗುಲದ ಬಳಿ ನಕ್ಷತ್ರ ಆಮೆಯನ್ನು ಸಾಗಿಸಲು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿರುವುದು.
Published on

ಯಳಂದೂರು: ಅಪರೂಪದ ನಕ್ಷತ್ರ ಆಮೆ ಸಾಗಿಸುತ್ತಿದ್ದ ಇಬ್ಬರನ್ನು ಸೋಮವಾರ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಆರಕ್ಷಕ ಉಪ ನಿರೀಕ್ಷಕ ವಿಜಯರಾಜ್ ನೇತೃತ್ವದ ತಂಡ ತಾಲೂಕಿನ ಮದ್ದೂರು ಗ್ರಾಮದ ಎಳೆಪಿಳ್ಳಾರಿ ದೇಗುಲದ ಬಳಿ ಇರುವ ಕೊಳದಲ್ಲಿ ನಕ್ಷತ್ರ ಆಮೆಯನ್ನು ಹಿಡಿದು ಸಾಗಿಸಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದೆ. ಈ ಸಂಬಂಧ ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಕೋಡಿವೂರು ಗ್ರಾಮದ ಕಾಳಪ್ಪ ರಾಮಪ್ಪ , ಚಾಮರಾಜನಗರ ಜಿಲ್ಲೆಯ ಮಲ್ಲಿಗೆಬಾವಿದೊಡ್ಡಿ ಗ್ರಾಮದ ಮುತ್ತುರಾಜ್ ಎಂಬ ವ್ಯಕ್ತಿಯನ್ನು ಬಂಧಿಸಿ, ಜೀವಂತ ನಕ್ಷತ್ರ ಆಮೆ, ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net