ಇಬ್ಬರು ಕೊಲೆ ಆರೋಪಿಗಳ ಬಂಧನ

23 Dwd 5 Harish Shindhe
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಗೋವನಕೊಪ್ಪ ಬಳಿಯ ಲೇಔಟ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಕೊಲೆ ಪ್ರಕರಣವನ್ನು ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದಾರೆ. ನಗರದ ಮಣಕಿಲ್ಲಾ ನಿವಾಸಿ, ಟೈಲ್ಸ್ ವೃತ್ತಿ ಮಾಡುತ್ತಿದ್ದ ಹರೀಶ ಶಿಂಧೆ ಎಂಬಾತನನ್ನು ಜು. 22ರ ರಾತ್ರಿ ಕೊಲೆ ಮಾಡಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಸರ್ಫರಾಜ್ ಹಾಗೂ ಸಾಹಿಲ್ ಎಂಬುವರನ್ನು ಬಂಽಸಿದ್ದಾರೆ. ಹರೀಶ ಶಿಂಧೆ ನೀಡಿದ್ದ ಹಣ ವಸೂಲಿಗೆ ಒತ್ತಾಯಿಸಿದ್ದ. ಇದೇ ವಿಚಾರವಾಗಿ ಮಾತನಾಡಲು ಕರೆಸಿದ್ದ ಆರೋಪಿಗಳು ಹರೀಶನನ್ನು ಕೊಲೆ ಮಾಡಿ ಮೃತದೇಹವನ್ನು ಲೇಔಟ್ ಪಕ್ಕದ ಸೋಯಾಬಿನ್ ಬೆಳೆಯಲ್ಲಿ ಎಸೆದಿದ್ದರು. ಪೊಲೀಸ್ ಇನ್‌ಸ್ಪೆಕ್ಟರ್ ಶಿವಾನಂದ ಕಮತಗಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಎರಡೇ ದಿನಗಳಲ್ಲಿ ಆರೋಪಿಗಳನ್ನು ಬಂಽಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net