ಮದ್ಯ ಕಳವು ಮಾಡಿದ್ದ ಇಬ್ಬರ ಬಂಧನ

11 skpp 3
Published on

ಸಕಲೇಶಪುರ: ತಾಲೂಕಿನ ಹಿರಿಯೂರು-ಕೂಡಿಗೆ ಗ್ರಾಮದಲ್ಲಿ ವೈನ್‌ಶಾಪ್ ಬೀಗ ಒಡೆದು ಲಕ್ಷಾಂತರ ರೂ. ಮೌಲ್ಯದ ಮದ್ಯ ಕಳವು ಮಾಡಿದ್ದವ ರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಲೂರು ತಾಲೂಕಿನ ಹುಣುಸೆ ಗ್ರಾಮದ ಮೋಹನ್ ಹಾಗೂ ಚಂದ್ರು ಬಂಧಿತರು. ಲೌಕ್‌ಡೌನ್ ಹಿನ್ನೆಲೆಯಲ್ಲಿ ಜನಸಂಚಾರವಿಲ್ಲದನ್ನು ಗಮನಿಸಿದ್ದ ಈ ಇಬ್ಬರು, ವೈನ್‌ಶಾಪ್ ಬೀಗ ಒಡೆದು ಸುಮಾರು 6.60 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳಿಗೆ ಸೇರಿದ ಮದ್ಯವನ್ನು ಕಳ್ಳತನ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಶ್ರೀನಿವಾಸ್ ಗೌಡ ಹಾಗೂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಕಳ್ಳರ ಬಂಧನಕ್ಕೆ ತಂಡ ರಚಿಸಿದ್ದರು.

ಪೊಲೀಸ್ ಉಪಅಧೀಕ್ಷಕ ಗೋಪಿ ಅವರ ಉಸ್ತುವಾರಿಯಲ್ಲಿ ವೃತ್ತ ನಿರೀಕ್ಷಕ ಗಿರೀಶ್ ಹಾಗೂ ಗ್ರಾಮಾಂತರ ಠಾಣೆ ಪಿಎಸ್‌ಐ ಚಂದ್ರಶೇಖರ್ ಅವರ ತಂಡ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ಮದ್ಯ, ಕೃತ್ಯಕ್ಕೆ ಬಳಸಲಾಗಿದ್ದ ಕಾರು ಹಾಗೂ ರಾಡ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಂಡದಲ್ಲಿ ಸಿಬ್ಬಂದಿ ಸತೀಶ್, ನಾಗರಾಜ್, ಅಶೋಕ್, ನಾಗರಾಜ್, ಶಿವಪ್ರಕಾಶ್, ಲೋಕೇಶ್, ಸುನಿಲ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net