

ಹುಬ್ಬಳ್ಳಿ: ಕೋರ್ಟ್‌ನಲ್ಲಿ ಉದ್ಯೋಗ, ನಿವೇಶನ ಕೊಡಿಸುವುದು ಸೇರಿ ಇತರ ವಿಷಯಗಳಿಗಾಗಿ ಬರೋಬ್ಬರಿ 61.25 ಲಕ್ಷ ರೂ. ಮುಂಡಾಯಿಸಿದ್ದ ವಂಚಕರಿಬ್ಬರನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಜೇಂದ್ರ ಕೊಕಟನೂರ, ಕಾರ್ತಿಕ ರಾಜೇಂದ್ರ ಸೇರಿ ಒಳಸಂಚು ಮಾಡಿ ದೂರುದಾರ ಮಿಥುನ್ ತೋಡಕರ ಅವರೊಂದಿಗೆ ಸ್ನೇಹ ಮಾಡಿದ್ದರು. ಸಹಾಯ ಮಾಡುವ ರೀತಿಯಲ್ಲಿ ದೊಡ್ಡವರ ಪರಿಚಯವಿದೆ ಎಂದು ರಾಜೇಂದ್ರ, ಕಾರ್ತಿಕ ಹೇಳಿಕೊಂಡಿದ್ದಾರೆ. ನೌಕರಿ, ನಿವೇಶನ ಕೊಡಿಸುವುದಾಗಿ 61.25 ಲಕ್ಷ ರೂ. ಪಡೆದು ಮರಳಿ ಕೊಡದೇ ವಂಚಿಸಿದ್ದರು ಎಂದು ಮಿಥುನ್ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇಬ್ಬರ ಹೆಡೆಮುರಿ ಕಟ್ಟಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.